ಬೆಂಗಳೂರು : ಜೂ.25ರಿಂದ ಜು. 4ರವರೆಗೆ 2015ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 9 ರಿಂದ 12.15ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5.15ರವರೆಗೆ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) ವಿಷಯಗಳಲ್ಲಿ ಅನುತ್ತೀರ್ಣವಾಗಿರುವ ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಕ್ರಮದಲ್ಲೇ ಪರೀಕ್ಷೆ ಬರೆಯಲು 2016ರ ವಾರ್ಷಿಕ ಪರೀಕ್ಷೆವರೆಗೆ ಮಾತ್ರ ಕಾಲಾವಕಾಶವಿರುತ್ತದೆ.
ಪಿಸಿಎಂಬಿ ಹೊರತುಪಡಿಸಿ ವಿಜ್ಞಾನ ವಿಭಾಗದ ಇತರೆ ವಿಷಯಗಳು ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಹಳೆಯ ಪಠ್ಯಕ್ರಮದವರಿಗೆ ಅದೇ ಪಠ್ಯದಲ್ಲಿ ಪರೀಕ್ಷೆ ಬರೆಯಲು 2018ರ ವಾರ್ಷಿಕ ಪರೀಕ್ಷೆವರೆಗೆ ಅವಕಾಶ ಇರಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.