Untitled Document
Sign Up | Login    
Dynamic website and Portals
  
May 18, 2015

ದ್ವಿತೀಯ ಪಿಯು ಫ‌ಲಿತಾಂಶ ಮಧ್ಯಾಹ್ನ 12ಕ್ಕೆ

ಬೆಂಗಳೂರು : ದ್ವಿತೀಯ ಪಿಯುಸಿ ಫ‌ಲಿತಾಂಶ ಸೋಮವಾರ ಬೆಳಗ್ಗೆ ಪ್ರಕಟವಾಗಲಿದೆ. ಗಣಿತ, ಇಂಗ್ಲಿಷ್‌ ಸೇರಿ ನಾಲ್ಕು ವಿಷಯಗಳಲ್ಲಿ 23 ಕೃಪಾಂಕ ನೀಡಿರುವುದರಿಂದ ಈ ಬಾರಿ ದಾಖಲೆ ಫ‌ಲಿತಾಂಶ ಬರಬಹುದು ಎಂಬ ನಿರೀಕ್ಷೆ ಇದೆ.

ಬೆಳಗ್ಗೆ 11.30ಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲ್ಲೇಶ್ವರದ ಇಲಾಖೆ ಕಚೇರಿಯಲ್ಲಿ ಫ‌ಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ವೆಬ್‌ ಸೈಟ್‌ಗಳಲ್ಲಿ ಫ‌ಲಿತಾಂಶ ಲಭ್ಯವಾಗಲಿದೆ.

ಈ ಬಾರಿ ಸುಮಾರು 20ಕ್ಕೂ ಹೆಚ್ಚು ವೆಬ್‌ ಸೈಟ್‌ ಗಳಲ್ಲಿ ವಿದ್ಯಾರ್ಥಿಗಳು ಫ‌ಲಿತಾಂಶ ಪಡೆಯಬಹುದಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷಮಾ ಗೋಡಬೋಲೆ ತಿಳಿಸಿದ್ದಾರೆ.

ಮಾರ್ಚ್‌ 12 ರಿಂದ 28ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 6.10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದ 1,017 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 4.96 ಲಕ್ಷ ಹೊಸ ವಿದ್ಯಾರ್ಥಿಗಳು, 82 ಸಾವಿರ ಪುನರಾವರ್ತಿತ ಹಾಗೂ 31 ಸಾವಿರ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ಕೆಳಗಿನ ವೆಬ್ ಸೈಟ್ ಗಳ ಮೂಲಕ ಫಲಿತಾಂಶ ಪಡೆಯಬಹುದು

http://www.pue.kar.nic.in
http://www.karresults.nic.in
http://www.puc.kar.nic.in
www.knowyourresult.com
www.indiaresults.com
www.examresults.net
www.karnatakaeducation.net
http://results.karnatakaeducation.net
www.bangaloreeducation.net
www.results.amarujala.com
www.BangaloreEducation.com
www.resultsat.com
www.resultout.com
www.optraservice.com
www.schools9.com
www.collegeforyou.com
www.goresults.net
www.digied.com
www.ace-online.co.in


ಎಸ್‌ಎಂಎಸ್‌ ಮೂಲಕವೂ ಫ‌ಲಿತಾಂಶ ಪಡೆಯಬಹುದಾಗಿದೆ. ಅಭ್ಯರ್ಥಿ ಯಾವುದೇ ಸಿಮ್‌ ಇರುವ ಮೊಬೈಲ್‌ನಲ್ಲಿ "ಕೆಎಆರ್‌12(ಸ್ಪೇಸ್‌)ರೋಲ್‌ ನಂಬರ್‌' ಟೈಪ್‌ ಮಾಡಿ 5676750 ಗೆ ಎಸ್‌ಎಂಎಸ್‌ ಮಾಡಿದರೆ ಇಂಡಿಯಾ ರಿಸಲ್ಟ್.ಕಾಂ ನಿಂದ ಫ‌ಲಿತಾಂಶದ ಸಂದೇಶ ತಲುಪುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited