ಬೀರ್ ಭೂಂ : ರಕ್ತರಂಜಿತ ರಾಜಕೀಯಕ್ಕೆ ಕುಖ್ಯಾತಿ ಪಡೆದಿರುವ ಪಶ್ಚಿಮ ಬಂಗಾಳದ ಬೀರ್ಭೂಂ ನಲ್ಲಿ ಸ್ಥಳೀಯ ಶಾಸಕರ ಮನೆಯಲ್ಲಿ ನಾಡಬಾಂಬ್ ಸ್ಪೋಟಗೊಂಡಿರುವುದು ಜನತೆಯಲ್ಲಿ ಭೀತಿ ಮೂಡಿಸಿದೆ.
ಶಾಸಕ ಬರೋ ಹನ್ ಸಡಾ ಅವರ ಮನೆಯಲ್ಲಿ ಭಾನುವಾರ ಬೆಳಗ್ಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಗಳು ಸ್ಪೋಟಗೊಂಡ ಪರಿಣಾಮವಾಗಿ ಶಾಸಕರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಾಸಕ ಹನ್ ಸಡಾ ಗಾಯಗೊಂಡಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿ, ಭದ್ರತೆ ಬಿಗಿಗೊಳಿಸಿದ್ದಾರೆ.
ಇದೀಗ ಶಾಸಕರ ಮನೆಯಲ್ಲೇ ನಾಡಬಾಂಬ್ ಸಿಡಿದಿರುವುದು ಆಡಳಿತಾರೂಢ ಟಿಎಂಸಿಗೆ ಭಾರೀ ಕಳಂಕ ತಂದಿಟ್ಟಿದೆ.
ಬೀರ್ ಭೂಂ ಜಿಲ್ಲೆಯ ಬೇಲ್ಪಾಟಾ ಗ್ರಾಮದಲ್ಲಿ ಬುಧವಾರ ನಡೆದ ಹಿಂಸಾತ್ಮಕ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು.