Untitled Document
Sign Up | Login    
Dynamic website and Portals
  
April 16, 2015

ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಗೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ

ರಘುರಾಮ್ ರಾಜನ್ ರಘುರಾಮ್ ರಾಜನ್

ಮುಂಬೈ : ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ಅವರಿಗೆ ಇಸ್ಲಾಮಿಕ್ ಉಗ್ರ ಸಂಘಟನೆ ಐ.ಎಸ್.ಐ.ಎಸ್ ನಿಂದ ಜೀವ ಬೆದರಿಕೆ ಬಂದಿದೆ.

ಡಿ.ಎನ್.ಎ ಪತ್ರಿಕೆ ವರದಿ ಪ್ರಕಾರ 583847@gmail.com ಎಂಬ ಇ-ಮೇಲ್ ಐಡಿ ಮೂಲಕ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಮೇಲ್ ಬಂದಿದ್ದು, ರಘುರಾಮ್ ರಾಜನ್ ಅವರನ್ನು ಕೊಲ್ಲುವುದಕ್ಕಾಗಿ ತಮಗೆ ಸುಪಾರಿ ನೀಡಲಾಗಿದ್ದು, ಕೊಲ್ಲುವುದಕ್ಕೆ ನೀಡಲಾಗಿರುವ ಹಣಕ್ಕಿಂತಲೂ ಹೆಚ್ಚು ಹಣ ನೀಡಿದರೆ ಸುಪಾರಿಯನ್ನು ಕೈಬಿಡುವ ಯೋಚನೆ ಮಾಡಲಾಗುತ್ತದೆ ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಿದ್ದಾರೆ.

ಬೆದರಿಕೆ ಬಂದಿರುವ ಇ-ಮೇಲ್ ಐಡಿ ಐ.ಎಸ್.ಐ.ಎಸ್ ಗೆ ಸೇರಿದ್ದಾಗಿದ್ದು, ಇ-ಮೇಲ್ ಐಡಿಯನ್ನು ಯು.ಎಸ್ ಕೆನಡಾ, ನೈಜೀರಿಯಾ, ಪೋಲ್ಯಾಂಡ್, ಬೆಲಿಜಿಯಂ, ಜರ್ಮನಿ ಸೇರಿದಂತೆ ಸುಮಾರು 10 ದೇಶಗಳಿಂದ ನಿರ್ವಹಣೆ ಮಾಡಲಾಗುತ್ತಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಬೆದರಿಕೆ ಇ-ಮೇಲ್ ಬಂದ ಕೂಡಲೇ ಎಚ್ಚೆತ್ತುಕೊಂಡ ಆರ್.ಬಿ.ಐ ನ ಅಧಿಕಾರಿಗಳು ಮುಂಬೈಕ್ರೈಮ್ ಬ್ರಾಂಚ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆದರಿಕೆ ಹಾಕಿರುವ ಇ-ಮೇಲ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸಿಸಿಐಸಿ ಯು.ಎಸ್ ಗೆ ಮನವಿ ಮಾಡಿದೆ.

583847@gmail.com ಇ-ಮೇಲ್ ಐಡಿ ಲಾಗಿನ್ ಮಾಹಿತಿಯನ್ನು ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited