Untitled Document
Sign Up | Login    
Dynamic website and Portals
  
April 15, 2015

42 ವರ್ಷಗಳ ಬಳಿಕ ಕೆನಡಾಕ್ಕೆ ಭಾರತದ ಪ್ರಧಾನಿ ಭೇಟಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಒಟ್ಟಾವಾ : ಜರ್ಮನಿ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ತಡರಾತ್ರಿಯಿಂದ 3 ದಿನಗಳ ಕೆನಡಾ ಪ್ರವಾಸ ಆರಂಭಿಸಿದ್ದಾರೆ.

42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕೆನಡಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಉಭಯ ದೇಶಗಳ ಬಾಂಧವ್ಯದ ದೃಷ್ಟಿಯಿಂದ ಮಹತ್ವದಾಗಿದೆ. ಕೆನಡಾಕ್ಕೆ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭೇಟಿ ನೀಡಿದ್ದರು.

ರಾಜಧಾನಿ ಒಟ್ಟಾವಾದಲ್ಲಿ ಕೆನಡಾ ಪ್ರಧಾನಿ ಸ್ಟೀಫ‌ನ್‌ ಹಾರ್ಪರ್‌ ಜೊತೆ ಪರಮಾಣು ಶಕ್ತಿ, ವಾಣಿಜ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಮೋದಿ ಚರ್ಚೆ ನಡೆಸಲಿದ್ದಾರೆ.

ಭಾರತವು ಕೆನಡಾ ಜತೆ ಅಣು ಸಹಕಾರ ಒಪ್ಪಂದ ಮಾಡಿಕೊಳ್ಳಲು ಉತ್ಸುಕವಾಗಿದೆ. ಭಾರತವು 1970ರ ದಶಕದಲ್ಲಿ ಪರಮಾಣು ಬಾಂಬ್‌ ತಯಾರಿಸಲು ಕೆನಡಾ ತಂತ್ರಜ್ಞಾನ ಬಳಸಿತ್ತು ಎನ್ನಲಾಗಿದ್ದು, ಆಗಿನಿಂದ ಉಭಯ ದೇಶಗಳ ಪರಮಾಣು ಸಹಕಾರ ವ್ಯವಹಾರವು ಸ್ಥಗಿತಗೊಂಡಿದೆ.

ಅಮೆರಿಕದ ಮ್ಯಾಡಿಸನ್‌ ಸ್ಕ್ವೇರ್‌ ಮಾದರಿಯಂತೆ ಟೊರಂಟೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಟೊರಂಟೊದಲ್ಲಿ ನಿರ್ಮಿಸಿರುವ ಸ್ಮಾರಕ ಹಾಗೂ ವ್ಯಾಂಕೋವರ್‌ನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited