Untitled Document
Sign Up | Login    
Dynamic website and Portals
  
May 10, 2016

ದೂರ ಶಿಕ್ಷಣದ ಮೂಲಕ 500 ಉಚಿತ ಕೋರ್ಸ್ ಗಳು: ಮೊಬೈಲ್ ಆ್ಯಪ್ ಮತ್ತು ಆನ್ಲೈನ್ 10 ಭಾಷೆಗಳಲ್ಲಿ 500 ಕೋರ್ಸ್ ಗಳ ಆರಂಭ

ನವದೆಹಲಿ : ಪ್ರಸಕ್ತ ವರ್ಷದಲ್ಲಿ ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್ ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಯುಜಿಸಿ(ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಸಹಯೋಗದೊಂದಿಗೆ ಓಪನ್ ಆ್ಯಂಡ್ ಡಿಸ್ಟೆನ್ಸ್ ಲರ್ನಿಂಗ್ (ಒಡಿಎಲ್) ಕೋರ್ಸ್ ಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಓಪನ್ ಆ್ಯಂಡ್ ಡಿಸ್ಟೆನ್ಸ್ ಲರ್ನಿಂಗ್ ಮೂಲಕ ಮಾನವಶಾಸ್ತ್ರ, ಸಾಮಾಜಿಕ ಅಧ್ಯಯನ ಮತ್ತು ಸಾಮಾನ್ಯ ವಿಜ್ಞಾನ ವಿಷಯಗಳ ಬಗ್ಗೆ ಕೋರ್ಸ್ ಆರಂಭಿಸಲಾಗುವುದು ಎಂದರು

ವಿಶೇಷವಾಗಿ ಮೊಬೈಲ್ ಆ್ಯಪ್ ಮತ್ತು ಆನ್ಲೈನ್ ಮೂಲಕ 10 ಭಾಷೆಗಳಲ್ಲಿ 500 ಕೋರ್ಸ್ ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಕೋರ್ಸ್ ಗಳೆಲ್ಲವೂ ಉಚಿತ ಕೋರ್ಸ್ ಗಳಾಗಿರುತ್ತವೆ ಎಂದು ತಿಳಿಸಿದರು.

ಈಗಾಗಲೇ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿ ಮತ್ತು ಸಾರ್ವಜನಿಕ ನಿಧಿಯ ರಾಜ್ಯ ಓಪನ್ ಯುನಿವರ್ಸಿಟಿಗಳಲ್ಲಿ ಒಡಿಎಲ್ ಮೂಲಕ ಕೋರ್ಸ್ ನಡೆಸಲಾಗುತ್ತಿದೆ. ಇದರ ಜತೆಗೆ ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣ ಸಂಸ್ಥೆಗಳೂ ಡೀಮ್ಡ್ ಯುನಿವರ್ಸಿಟಿಗಳಲ್ಲಿಯೂ ಈ ಕೋರ್ಸ್ ಗಳನ್ನು ನಡೆಸಲಾಗುತ್ತದೆ. ಇನ್ನು ಎನ್.ಐ.ಟಿ.ಯ ಪಠ್ಯ ಕ್ರಮಕ್ಕೆ ಸಂಬಂಧಿಸಿದಂತೆ ಮೆಸಾಚ್ಯುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಇಂಜಿನಿಯಂರಿಗ್ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯಗಳ ಜತೆ ಚರ್ಚೆ ನಡೆದಿದೆ ಎಂದು ವಿವರಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited