ನವದೆಹಲಿ : 'ಜಾಗತಿಕ ತಾಪಮಾನ' ಈ ಶತಮಾನದ ಅತಿ ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟಲು ನಾವು ದೃಢ ಹೆಜ್ಜೆ ಇಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಏ.6ರಂದು ನವದೆಹಲಿಯ ವಿಜ್ನಾನ ಭವನದಲ್ಲಿ ಭಾರತದ ಮೊದಲ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ತಾಪಮಾನ ತಡೆಗಟ್ಟಿ, ಹವಾಮಾನ ಬದಲಾವಣೆಯಾಗಬೇಕಾದರೆ ಜೀವನ ಶೈಲಿ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲ ರಾಷ್ಟ್ರಗಳು ಭಾರತಕ್ಕೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ ಪರಿಸರ ಸಂರಕ್ಷಣೆ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಭಾರತಕ್ಕೆ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ಇದೆ. ಭಾರತದ ಕಾಳಜಿ ಬಗ್ಗೆ ಇತರ ರಾಷ್ಟ್ರಗಳು ಚಿಂತನೆ ನಡೆಸಬೇಕಿದೆ ಎಂದು ಕರೆ ನೀಡಿದ್ದಾರೆ.
ಹವಾಮಾನ ಬದಲಾವಣೆ ಬಗ್ಗೆ ಭಾರತ ಇತರ ರಾಷ್ಟ್ರಗಳನ್ನು ಮುನ್ನಡೆಸುವಂತಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.