Untitled Document
Sign Up | Login    
Dynamic website and Portals
  
February 24, 2015

ಬ್ಯಾಂಕ್‌ ಮುಷ್ಕರ ವಾಪಸ್: ತಿಂಗಳಿಗೆ 2 ಶನಿವಾರ ರಜೆ

ಮುಂಬೈ : ಸಾರ್ವಜನಿಕ ವಲಯದ ಬ್ಯಾಂಕ್‌ ನೌಕರರ ಬಹುದಿನದ ಬೇಡಿಕೆಯನ್ನು ಈಡೇರಿಸಲು, ಭಾರತೀಯ ಬ್ಯಾಂಕ್‌ ಗಳ ಒಕ್ಕೂಟ ನಿರ್ಧರಿಸಿದೆ. ಹೀಗಾಗಿ ಫೆ.25ರಿಂದ ಕೈಗೊಳ್ಳಲು ಉದ್ದೇಶಿಸಿದ್ದ 4 ದಿನಗಳ ಮುಷ್ಕರವನ್ನು ಬ್ಯಾಂಕ್‌ ನೌಕರರು ಬಿಟ್ಟಿದ್ದಾರೆ.

ಮುಂಬೈನಲ್ಲಿ ನಡೆದ ಉಭಯ ಬಣಗಳ ನಡುವಿನ ಮಾತುಕತೆ ವೇಳೆ ಬ್ಯಾಂಕ್‌ ನೌಕರರ ವೇತವನ್ನು ಶೇ.15ರಷ್ಟು ಏರಿಸುವ ಮತ್ತು ಪ್ರತಿ ತಿಂಗಳ 2 ಮತ್ತು 4ನೇ ಶನಿವಾರವನ್ನು ರಜಾ ದಿನವೆಂದು ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ, ತಿಂಗಳ ಉಳಿದೆರಡು ಶನಿವಾರಗಳಂದು ಅರ್ಧ ದಿನದ ಬದಲಾಗಿ ಇಡೀ ದಿನ ಕಾರ್ಯನಿರ್ವಹಿಸುವ ತೀರ್ಮಾನವನ್ನೂ ಮಾಡಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಯುನೈಟೆಡ್‌ ಫೋರಮ್‌ ಆಫ್ ಬ್ಯಾಂಕ್‌ ಯುನಿಯನ್ಸ್‌ ನ ಸಂಚಾಲಕ ಎಂ.ವಿ.ಮುರಳಿ, ಶೇ.17.5ರಷ್ಟು ವೇತನ ಏರಿಸುವಂತೆ ನಾವು ಬೇಡಿಕೆ ಇಟ್ಟಿದ್ದೆವು.

ಆದರೆ ಬ್ಯಾಂಕ್‌ಗಳ ಒಕ್ಕೂಟ ಶೇ.15ರಷ್ಟು ವೇತನ ಏರಿಸುವ ಭರವಸೆ ನೀಡಿದೆ. ಈ ವೇತನ ಏರಿಕೆ 2012ರ ನವೆಂಬರ್ ನಿಂದಲೇ ಪೂರ್ವಾನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಾರಕ್ಕೆ 5 ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೆ ತರಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಬ್ಯಾಂಕ್‌ ಗಳ ಒಕ್ಕೂಟ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರವನ್ನು ಮಾತ್ರ ರಜಾ ದಿನವೆಂದು ಘೋಷಿಸಲು ಒಪ್ಪಿಕೊಂಡಿವೆ. ಇದಕ್ಕೂ ಬ್ಯಾಂಕ್‌ ನೌಕರರ ಸಂಘಟನೆ ಸಮ್ಮತಿ ನೀಡಿದೆ. ಹೀಗಾಗಿ ಫೆ.25ರಿಂದ ನಡೆಸಲು ಉದ್ದೇಶಿಸಲಾಗಿದ್ದ 4 ದಿನಗಳ ಮುಷ್ಕರ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಈ ಬೇಡಿಕೆಗಳನ್ನು ಈಡೇರಿಸುವಂತೆ ಬ್ಯಾಂಕ್‌ ನೌಕರರು ಕಳೆದ 2 ವರ್ಷಗಳಿಂದ ಹಲವು ಬಾರಿ ಮುಷ್ಕರ ನಡೆಸಿದ್ದರು. ಜೊತೆಗೆ ಒಟ್ಟಾರೆ 18 ಸುತ್ತಿನ ಮಾತುಕತೆಯನ್ನೂ ನಡೆಸಿದ್ದವು. ಈ ವೇತನ ಹೆಚ್ಚಳ ನಿರ್ಧಾರದಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಲಕ್ಷ ನೌಕರರಿಗೆ ಭಾರೀ ಲಾಭವಾಗಲಿದೆ. ಜೊತೆಗೆ ವೇತನ ಹೆಚ್ಚಳವು ಬ್ಯಾಂಕ್‌ಗಳ ಮೇಲೆ 4725 ಕೋಟಿ ರೂ. ಹೊರೆಯನ್ನು ಹೊರಿಸಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited