Untitled Document
Sign Up | Login    
Dynamic website and Portals
  
February 17, 2015

ಶೂನ್ಯಕ್ಕಿಂತ ಕೆಳಗಿಳಿದ ಹಣದುಬ್ಬರ

ಶೂನ್ಯಕ್ಕಿಂತ ಕೆಳಗಿಳಿದ ಹಣದುಬ್ಬರ

ನವದೆಹಲಿ : ಆಹಾರ ವಸ್ತುಗಳ ಬೆಲೆ ಹೆಚ್ಚಿದ್ದರೂ ಸಗಟು ಹಣದುಬ್ಬರ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದು, ಜನವರಿಯಲ್ಲಿ ಮೈನಸ್‌ ಶೇ.0.39ಕ್ಕೆ ಇಳಿಕೆ ಕಂಡಿದೆ.

ಹಣದುಬ್ಬರ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿರುವುದು ಐದೂವರೆ ವರ್ಷಗಳಲ್ಲಿ ಇದೇ ಮೊದಲು. ಉತ್ಪಾದಿತ ಸರಕು ಹಾಗೂ ತೈಲ ಉತ್ಪನ್ನಗಳು ಅಗ್ಗವಾಗಿದ್ದೇ ಸಗಟು ಹಣದುಬ್ಬರ ಇಳಿಕೆಯಾಗಲು ಕಾರಣ ಎಂದು ಹೇಳಲಾಗಿದೆ.

ಹಣದುಬ್ಬರ ಇಳಿಕೆ ಬೆನ್ನಲ್ಲೇ ರಿಸರ್ವ್‌ ಬ್ಯಾಂಕ್‌ ಮತ್ತೂಮ್ಮೆ ಬಡ್ಡಿ ದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಸಗಟು ಹಣದುಬ್ಬರ ಡಿಸೆಂಬರ್ ನಲ್ಲಿ ಶೇ.0.11ರಷ್ಟಿತ್ತು. ನವೆಂಬರ್ ನಲ್ಲಿ ಶೂನ್ಯಕ್ಕೆ ಕುಸಿದಿತ್ತಾದರೂ ಪರಿಷ್ಕೃತ ಅಂದಾಜು ಪ್ರಕಾರ ಅದು -ಶೇ.0.17 ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಜನವರಿಯಲ್ಲಿ -ಶೇ.0.39ಕ್ಕೆ ಇಳಿಕೆ ಕಂಡಿದೆ.

2009 ಜೂನ್‌ನಲ್ಲಿ ಸಗಟು ಹಣದುಬ್ಬರ -ಶೇ.0.4ರಷ್ಟಿತ್ತು. ಈ ನಡುವೆ, ಚಿಲ್ಲರೆ ಹಣದುಬ್ಬರ ಜನವರಿಯಲ್ಲಿ ಶೇ.5.11ಕ್ಕೆ ಏರಿಕೆ ಕಂಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited