Untitled Document
Sign Up | Login    
Dynamic website and Portals
  
March 11, 2015

1 ರೂ. ನೋಟು ಮಾರುಕಟ್ಟೆಗೆ ಬಿಡುಗಡೆ

1 ರೂ. ನೋಟು ಮಾರುಕಟ್ಟೆಗೆ ಬಿಡುಗಡೆ

ನವದೆಹಲಿ : ಬರೋಬ್ಬರಿ 20 ವರ್ಷಗಳ ಬಳಿಕ 1 ರೂ. ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್.ಬಿ.ಐ) ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ರಾಜಸ್ಥಾನದ ನಾಥ್‌ ವಾಡಾದ ಶ್ರೀನಾಥ್‌ ಜಿ ದೇಗುಲದಲ್ಲಿ ಮಾ.6ರಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಖಾತೆ ಕಾರ್ಯದರ್ಶಿ ರಾಜೀವ್‌ ಮಹರ್ಷಿ ಅವರು 1 ರೂ. ನೋಟನ್ನು ಬಿಡುಗಡೆಗೊಳಿಸಿದ್ದಾರೆ. 2011ರ ಕಾಯಿನೇಜ್‌ ಕಾನೂನು ಪ್ರಕಾರ ಮತ್ತೆ ನೋಟು ಮುದ್ರಣಕ್ಕೆ ಆರ್.ಬಿ.ಐ ಶುರುಮಾಡಿದೆ. ಇದರೊಂದಿಗೆ ಸದ್ಯ ಚಾಲ್ತಿಯಲ್ಲಿರುವ 1 ರೂ. ನೋಟಗಳನ್ನೂ ವ್ಯವಹಾರದಲ್ಲಿ ಬಳಸಬಹುದಾಗಿದೆ. 1994ರ ನವೆಂಬರ್ ನಲ್ಲಿ ದೊಡ್ಡ ಮುಖ ಬೆಲೆಯ ನೋಟುಗಳ ಮುದ್ರಣಕ್ಕೆ ಅನುವು ಮಾಡಿಕೊಡುವ ಸಲುವಾಗಿ 1 ರೂ. ನೋಟು ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು.

1.ರೂ. ನೋಟನ್ನು ಶೇ.100ರಷ್ಟು ಶುದ್ಧ ಹತ್ತಿ ಕಾಗದದಿಂದ ತಯಾರಿಸಲಾಗಿದ್ದು, ಪ್ರತಿ ಚದರ ಮೀ.ಗೆ 90 ಗ್ರಾಂ ಭಾರವಿದೆ. ಅಲ್ಲದೇ 110 ಮೈಕ್ರಾನ್‌ ನಷ್ಟು ದಪ್ಪವಿದೆ. ಗುಲಾಬಿ ಹಸಿರು ಬಣ್ಣದ ಚೌಕಾಕಾರದ ಈ ನೋಟಿನಲ್ಲಿ ’ಸತ್ಯಮೇವ ಜಯತೆ' ಎಂದು ಬರೆಯದೇ ಕೇವಲ ಅಶೋಕ ಸ್ತಂಭದ ಚಿಹ್ನೆ, 1 ರೂ. ಎಂದು (ವಾಟರ್ ಮಾರ್ಕ್‌) ಬರೆಯಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited