Untitled Document
Sign Up | Login    
Dynamic website and Portals
  
February 15, 2015

ಕುಟುಂಬದ ಒಬ್ಬರಿಗೆ ಮಾತ್ರ ಜನಧನ ಯೋಜನೆಯಡಿಡಿ 5000 ರೂ. ಓ.ಡಿ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಜನ-ಧನ ಯೋಜನೆಯಡಿ ಬ್ಯಾಂಕ್‌ ಖಾತೆ ತೆರೆದವರಿಗೆ ಓವರ್‌ ಡ್ರಾಫ್ಟ್ (ಓ.ಡಿ.) ನೀಡುವ ಸೌಲಭ್ಯವನ್ನು ಕೇಂದ್ರ ಹಣಕಾಸು ಸಚಿವಾಲಯ ಆರಂಭಿಸಿದೆ. ಆದರೆ ಇದಕ್ಕೆ ಹಲವಾರು ಷರತ್ತುಗಳನ್ನೂ ವಿಧಿಸಲಾಗಿದೆ.

ಕುಟುಂಬದಲ್ಲಿ ಎಷ್ಟೇ ಮಂದಿ ಜನ-ಧನದಡಿ ಬ್ಯಾಂಕ್‌ ಖಾತೆ ಮಾಡಿಸಿಕೊಂಡಿದ್ದರೂ ಆ ಪೈಕಿ ಆದಾಯ ಗಳಿಸುತ್ತಿರುವ ಒಬ್ಬ ವ್ಯಕ್ತಿಗೆ ಮಾತ್ರ 5 ಸಾವಿರ ರೂ.ವರೆಗೆ ಓ.ಡಿ. ಸೌಲಭ್ಯ ಸಿಗುತ್ತದೆ. ಅದರಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.

ಮೂರು ವರ್ಷಗಳ ಅವಧಿಗೆ ಈ ಓ.ಡಿ. ನೀಡಲಾಗುತ್ತದೆ. ಬ್ಯಾಂಕ್‌ ಖಾತೆಯಲ್ಲಿರುವ ಮಾಸಿಕ ಸರಾಸರಿ ಬಾಕಿ ಮೊತ್ತದ ನಾಲ್ಕು ಪಟ್ಟು ಅಥವಾ ಕಳೆದ ಆರು ತಿಂಗಳ ಅವಧಿಯಲ್ಲಿ ಖಾತೆಗೆ ಜಮೆಯಾಗಿರುವ ಹಣದ ಸರಾಸರಿಯ ಶೇ.50ರಷ್ಟು ಮಾತ್ರ ಕೊಡಲಾಗುತ್ತದೆ. ಆದರೆ 5000 ರೂ. ಮಿತಿ ನಿಗದಿಪಡಿಸಲಾಗಿದೆ. ಬ್ಯಾಂಕುಗಳು ಈ ಓ.ಡಿ. ಮೊತ್ತಕ್ಕೆ ಮೂಲ ದರ (ಶೇ.10ರಷ್ಟಿದೆ)ದ ಮೇಲೆ ಶೇ.2ರವರೆಗೂ ಬಡ್ಡಿ ವಿಧಿಸಬಹುದಾಗಿದೆ ಎಂದು ಹಣಕಾಸು ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಓ.ಡಿ. ಸೌಲಭ್ಯ ಪಡೆಯುವ ಗ್ರಾಹಕರು ಕಳೆದ ಆರು ತಿಂಗಳಿನಿಂದ ಖಾತೆಯಲ್ಲಿ ವ್ಯವಹಾರ ನಡೆಸಿರಬೇಕು. ಅಡುಗೆ ಅನಿಲ ನೇರ ಸಬ್ಸಿಡಿ ಯೋಜನೆ ಅಥವಾ ಇನ್ನಿತರೆ ಮೂಲಗಳಿಂದ ಖಾತೆಗೆ ಹಣ ಜಮೆಯಾಗಿರಬೇಕು. ಅಲ್ಲದೆ ಓ.ಡಿ. ಪಡೆಯುವ ಖಾತೆಗಳು ಆಧಾರ್‌ ಜತೆ ಜೋಡಣೆಯಾಗಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited