Untitled Document
Sign Up | Login    
Dynamic website and Portals
  
February 4, 2015

ದೆಹಲಿ ಚುನಾವಣೆ: 3 ಸಮೀಕ್ಷೆಗಳಲ್ಲಿ ಎಎಪಿಗೆ ಹೆಚ್ಚು ಸ್ಥಾನ

ಅರವಿಂದ್ ಕೇಜ್ರಿವಾಲ್ ಅರವಿಂದ್ ಕೇಜ್ರಿವಾಲ್

ನವದೆಹಲಿ : ಮೂರು ಪ್ರಮುಖ ಚುನಾವಣಾ ಸಮೀಕ್ಷೆಯ ಒಟ್ಟಾರೆ ಲೆಕ್ಕಾಚಾರದಲ್ಲಿ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ರ ಆಮ್‌ ಆದ್ಮಿ ಪಕ್ಷ 37 ಸ್ಥಾನಗಳನ್ನು ಪಡೆಯಲಿದ್ದು, ಇದು ಸದನದ ಒಟ್ಟು 70 ಸ್ಥಾನ ಬಲದ ಅರ್ಧಾಂಶಕ್ಕೂ ಹೆಚ್ಚು ಎನ್ನುವುದು ಗಮನಾರ್ಹವಾಗಿದೆ.

ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ 29 ಸ್ಥಾನಗಳು ಪ್ರಾಪ್ತವಾಗಲಿದ್ದು, ಕಳೆದ ಬಾರಿಯ 2013ರ ಡಿಸೆಂಬರ್ ಚುನಾವಣೆಯಲ್ಲಿನ ಗಳಿಕೆಗಿಂತ 3 ಸ್ಥಾನಗಳು ಕಡಿಮೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ಗೆ ಈ ಬಾರಿ ಕೇವಲ ನಾಲ್ಕು ಸ್ಥಾನಗಳು ಮಾತ್ರವೇ ಸಿಗಲಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಹಿಂದುಸ್ಥಾನ್‌ ಟೈಮ್ಸ್‌, ಇಕಾನಮಿಕ್‌ ಟೈಮ್ಸ್‌ ಮತ್ತು ಎಬಿಪಿ ನ್ಯೂಸ್‌ ನಡೆಸಿರುವ ಸಮೀಕ್ಷೆಯನ್ನು ಒಟ್ಟಾಗಿ ಆಧರಿಸಿ ಎನ್‌ಡಿಟಿಸಿ ನಡೆಸಿರುವ ಚುನಾವಣಾ ಸಮೀಕ್ಷೆಯಲ್ಲಿ ಈ ವಿಷಯವು ತಿಳಿದು ಬಂದಿದೆ.

ಆಮ್‌ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಎಎಪಿಯ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯಾಗಿ ಕಿರಣ್‌ ಬೇಡಿ ಅವರು ಕಣಕ್ಕಿಳಿದಿದ್ದಾರೆ.

ಕಳೆದ ಬಾರಿ ಕೇವಲ 49 ದಿನಗಳ ಆಡಳಿತ ನಡೆಸಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಕೇಜ್ರಿವಾಲ್‌ ಅವರು ತಮ್ಮ ಈ ಹಿಂದಿನ ನಿರ್ಧಾರಕ್ಕೆ ಮತದಾರರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited