ನವದೆಹಲಿ : ಹಿಂದೂ ಮಹಿಳೆಯರು ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಈ ಹಿಂದೆ ತಾನು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ಸಮರ್ಥಿಸಿಕೊಂಡಿದ್ದಾರೆ.
ಹಿಂದೂ ಮಹಿಳೆಯರು ಹೀಗೆ ಹೆರುವ ನಾಲ್ಕು ಮಕ್ಕಳಲ್ಲಿ, ಒಂದು ಮಗುವನ್ನು ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವುದಕ್ಕೆ, ಒಂದು ಮಗುವನ್ನು ಸನ್ಯಾಸಿಗಳಿಗೆ ಮತ್ತು ಇಬ್ಬರು ಮಕ್ಕಳನ್ನು ವಿಶ್ವ ಹಿಂದೂ ಪರಿಷತ್ ಸೇವೆಗಾಗಿ ನೀಡಬೇಕು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾನು ಹಿಂದೂ ಮಹಿಳೆಯರಿಗೆ ನಾಲ್ಕು ಮಕ್ಕಳನ್ನು ಹೆರಲು ಹೇಳಿದ್ದೇನೆಯೇ ವಿನಾ 40 ಮರಿಗಳನ್ನು ಇಡಲು ಹೇಳಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಸಿಂಹವು ಒಂದೇ ಮರಿಯನ್ನು ಹೊಂದಿರುವುದಿಲ್ಲ, ಹಾಗೆಯೇ ಹಿಂದೂ ಮಹಿಳೆಯರು ಒಂದೇ ಮಗುವನ್ನು ಹೊಂದಿರುವ ಹಾಗಿಲ್ಲ ಎಂದು ಪ್ರಾಚಿ ಹೇದ್ದಾರೆ.
ಭಾರತದಲ್ಲಿ ಹುಟ್ಟಿ ಬೆಳೆದಿರುವ ಎಲ್ಲರೂ ಭಾರತೀಯರು ಮತ್ತು ಅವರೆಲ್ಲರೂ ಹಿಂದೂಗಳು, ಮಜ್ಲಿಸ್ ಎ ಇತ್ತೆಹಾದ್ ಮುಸ್ಲಿಮಾನ್ ನಾಯಕ ಅಸಾಉದ್ದೀನ್ ಒವೈಸಿ ಇದನ್ನು ಒಪ್ಪಿಕೊಳ್ಳಬೇಕು. ಒಂದೊಮ್ಮೆ ಅದು ಅವರಿಗೆ ಸಾಧ್ಯವಾಗದಿದ್ದರೆ ಅವರು ಪಾಕಿಸ್ಥಾನಕ್ಕೆ ಹೋಗಿ ನೆಲೆಸಬೇಕು ಎಂದಿದ್ದಾರೆ.