Untitled Document
Sign Up | Login    
Dynamic website and Portals
  
January 22, 2015

ದೆಹಲಿ ಚುನಾವಣೆ: ಆಸ್ತಿ ವಿವರ ಘೋಷಿಸಿದ ಕಿರಣ್ ಬೇಡಿ, ಕೇಜ್ರಿವಾಲ್

ನವದೆಹಲಿ : ದೆಹಲಿಯ ಕೃಷ್ಣಾನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಹುರಿಯಾಳಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ, 11.65 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ವಿಶೇಷವೆಂದರೆ ಇವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ತಮ್ಮ ಒಟ್ಟು ಆಸ್ತಿ ಮೌಲ್ಯದ ಪೈಕಿ 11,04,02,677 ರೂ. ತಮ್ಮದೆಂದು ಮತ್ತು ತಮ್ಮ ಪತಿಯ ಆಸ್ತಿ 61,35,528 ರೂ.ಗಳೆಂದು ಕಿರಣ್‌ ಬೇಡಿ ತಿಳಿಸಿದ್ದಾರೆ.

ಚರಾಸ್ತಿ ,14,02,677 ರೂ, ಪತಿಯ ಚರಾಸ್ತಿ 32,85,528 ರೂ, 25 ಸಾವಿರ ರೂ. ಮೌಲ್ಯದ 5 ಗ್ರಾಂ ಚಿನ್ನ, 6.05 ಕೋಟಿ ಮೌಲ್ಯದ 3 ಫ್ಲ್ಯಾಟ್‌, ಮಾರುತಿ 800 ಕಾರು, ಪುಣೆಯಲ್ಲಿ 1.6 ಕೋಟಿ ಮೌಲ್ಯದ ಕೃಷಿ ಭೂಮಿ, ಗುಡಗಾಂವ್‌ನಲ್ಲಿ 25 ಲಕ್ಷ ಮೌಲ್ಯದ ಕೃಷಿ ಜಮೀನು, ಪತಿ ಒಡೆತನದಲ್ಲಿ ಅಮೃತಸರ ಬಳಿ 28.5 ಲಕ್ಷ ಮೌಲ್ಯದ ಕೃಷಿ ಭೂಮಿ, ಕೈಲಿ 55,750 ರೂ. ನಗದು, ಪತಿ ಬಳಿ 15,500 ರೂ. ನಗದು, 2.1 ಕೋಟಿ ರೂ. ಮೌಲ್ಯದ ಎಫ್ಡಿ, 25,43,852 ರೂ. ಎಸ್‌ಬಿ ಖಾತೆಯಲ್ಲಿ. 2013ರಲ್ಲಿ 67,15,464 ರೂ. ಆದಾಯ, ಪತಿಯ ಆದಾಯ ತೆರಿಗೆ ಮಿತಿಗಿಂತ ಕಮ್ಮಿ.

ನವದೆಹಲಿ ವಿಧಾನಸಭೆ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪಕ್ಷದ ನೇತಾರ ಅರವಿಂದ ಕೇಜ್ರಿವಾಲ್‌ ತಮ್ಮ ಆಸ್ತಿಯ ಪ್ರಮಾಣಪತ್ರ ವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ವಿಶೇಷ ಎಂದರೆ ಅವರ ಆಸ್ತಿಯಲ್ಲಿ ಕಳೆದ ಲೋಕಸಭಾ ಚುನಾವಣೆ ವೇಳೆಗಿಂತ 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ. ಆದರೆ ಪೊಲೀಸ್‌ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಕೇಜ್ರಿವಾಲ್‌ ಸ್ಪರ್ಧಿಸಿದ್ದಾಗ ಅವರು ಮತ್ತು ಅವರ ಪತ್ನಿಯ ಹೆಸರಿನಲ್ಲಿ ಒಟ್ಟು 2.14 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು. ಈಗ ಒಟ್ಟು ಆಸ್ತಿಯ ಮೌಲ್ಯವನ್ನು 2.09 ಕೋಟಿ ರೂ. ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಇನ್ನು ಲೋಕಸಭೆ ಚುನಾವಣೆ ವೇಳೆ 7 ಪ್ರಕರಣಗಳನ್ನು ಹೊಂದಿದ್ದ ಅವರು ಈ ಸಲ 10 ಎಂದು ನಮೂದಿಸಿದ್ದಾರೆ.

ಚರಾಸ್ತಿ 3.36 ಲಕ್ಷ, ಪತ್ನಿ ಹೆಸರಲ್ಲಿ ಚರಾಸ್ತಿ 15.28 ಲಕ್ಷ, ಗಾಜಿಯಾಬಾದ್‌, ಹರ್ಯಾಣದಲ್ಲಿ ತಲಾ 1 ಫ್ಲ್ಯಾಟ್‌ (ಮೌಲ್ಯ ಕ್ರಮವಾಗಿ 55 ಮತ್ತು 37 ಲಕ್ಷ), ಪತ್ನಿ ಹೆಸರಲ್ಲಿ ಗುಡಗಾಂವ್‌ನಲ್ಲಿ 1 ಕೋಟಿ ಮೌಲ್ಯದ 2,244 ಚದರಡಿ ಫ್ಲ್ಯಾಟ್‌, ಕೈಲಿರುವ ನಗದು 15 ಸಾವಿರ, ಪತ್ನಿ ಹತ್ತಿರ ನಗದು 10 ಸಾವಿರ ರೂ, ಪತ್ನಿ ಹೆಸರಲ್ಲಿ ಸಾಲ 41 ಲಕ್ಷ, 2013-14ರಲ್ಲಿನ ಆದಾಯ 2.07 ಲಕ್ಷ ರೂ, ಪತ್ನಿಯ ಆದಾಯ 11.83 ಲಕ್ಷ ರೂ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited