Untitled Document
Sign Up | Login    
Dynamic website and Portals
  
January 9, 2015

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆಗೆ ಸೋಲು

ಮಹಿಂದಾ ರಾಜಪಕ್ಸೆ ಮಹಿಂದಾ ರಾಜಪಕ್ಸೆ

ಕೊಲಂಬೋ : 'ಶ್ರೀಲಂಕಾ'ದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಸೋತಿದ್ದಾರೆ.

ರಾಜಪಕ್ಸೆ ಪ್ರತಿಸ್ಪರ್ಧಿ ಮೈತ್ರಿಪಾಲ ಸಿರಿಸೇನಾ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ.

ಈ ಮೂಲಕ ರಾಜಪಕ್ಸೆ 3ನೇ ಬಾರಿ ಶ್ರೀಲಂಕಾದ ಅಧ್ಯಕ್ಷರಾಗುವ ಕನಸು ನುಚ್ಚು ನೂರಾಗಿದೆ. ಸೋಲಿನ ಬಗ್ಗೆ ಮಾತಾಡಿರುವ ರಾಜಪಕ್ಸೆ, ಮುಂದಿನ ಸರ್ಕಾರ ರಚನೆಗೆ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜಪಕ್ಸೆ, ಕೊಲಂಬೋದಲ್ಲಿನ ತಮ್ಮ ಸರ್ಕಾರಿ ನಿವಾಸ ಟೆಂಪಲ್ ಟ್ರೀಯನ್ನ ತೊರೆದಿದ್ದಾರೆ.

ರಾಜಪಕ್ಸೆ ಸೋಲು ಒಪ್ಪಿಕೊಳ್ಳುವ ಮೂಲಕ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಚಾರ ವಿಫಲಗೊಂಡಿದೆ. ರಾಜಪಕ್ಸೆ ಪರವಾಗಿ ಸಲ್ಮಾನ್ ಖಾನ್, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೂಡಿ ಶ್ರೀಲಂಕಾದದಲ್ಲಿ ಪ್ರಚಾರ ನಡೆಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited