ನವದೆಹಲಿ : ಯೋಜನಾ ಆಯೋಗಕ್ಕೆ ಹೊಸ ರೂಪ ನೇಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನಾ ಆಯೋಗದ ಹೆಸರನ್ನು ಬದಲಿಸಿ, ನೀತಿ ಆಯೋಗ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.
ನೀತಿ ಆಯೋಗವೆಂದರೆ ಪರಿವರ್ತನೆ ಭಾರತಕ್ಕಾಗಿ ರಾಷ್ಟ್ರೀಯ ಸಂಸ್ಥೆ. ಈ ನೀತಿ ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮುಖ್ಯಸ್ಥರಾಗಿದ್ದು, ಉಪ ಮುಖ್ಯಸ್ಥರನ್ನು ಪ್ರಧಾನಿಯೇ ನೇಮಕ ಮಾಡಲಿದ್ದಾರೆ.
ನೀತಿ ಆಯೋಗದಲ್ಲಿ ಐವರು ಸದಸ್ಯರಿಗೆ ಆಜೀವ ಸ್ಥಾನಮಾನ ನೀಡಲಾಗಿದ್ದು, ಐವರಲ್ಲಿ ನಾಲ್ವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಮತ್ತಿಬ್ಬರಿಗೆ ಅರೆಕಾಲಿಕ ಸ್ಥಾನ ಹಾಗೂ ಓರ್ವ ಸಿ.ಒ.ಒರನ್ನು ಸೇರ್ಪಡೆ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ದಿನ ಯೋಜನಾ ಆಯೋಗದ ಬದಲು ಆಧುನಿಕ ಸಂಸ್ಥೆಯೊಂದನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯೋಜನಾ ಆಯೋಗವನ್ನು 'ನೀತಿ ಆಯೋಗ' ಎಂದು ಮರು ನಾಮಕರಣ ಮಾಡಿದೆ.