BW News Bureau : ಪ್ರಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಒ.ಎಲ್.ಎಕ್ಸ್ ವೆಬ್ ಸೈಟ್ ನಲ್ಲಿ ಏನೇನು ಮಾರಾಟಕ್ಕೆ ಇರಬಹುದು? ಮೊಬೈಲ್, ಬೈಕ್, ಕಾರು, ಎಲ್ಲವೂ ಮಾರಾಟಕ್ಕೆ ಸಿಗುತ್ತವೆ. ಆದರೆ ಬಿ.ಎಂ.ಟಿ.ಸಿ ಬಸ್ ಬಿಕರಿಗಿರುವುದನ್ನು ಎಲ್ಲಾದರೂ ಕೇಳಿದ್ದೀರಾ?
ಹೌದು ಕೇವಲ 5 ಲಕ್ಷಕ್ಕೆ ಬಿ.ಎಂ.ಟಿ.ಸಿ ಬಸ್ ಒ.ಎಲ್.ಎಕ್ಸ್ ನಲ್ಲಿ ಬಿಕರಿಗಿದೆ! ಮೊನೀಷ್ ಎಂಬ ವ್ಯಕ್ತಿ ಸೆ.22ರಂದು ಬಿಎಂಟಿಸಿ ಬಸ್ (ಕೆಎ01 ಎಫ್ 3701) ಫೋಟೋವನ್ನು ಮೊಬೈಲ್ನಲ್ಲಿ ಕ್ಲಿಕ್ಕಿಸಿ ಒ.ಎಲ್.ಎಕ್ಸ್. ಇನ್ ನಲ್ಲಿ ಮಾರಾಟಕ್ಕೆ ಹಾಕಿದ್ದಾನೆ ಹಾಗೂ ಸಂಪರ್ಕಕ್ಕೆ ದೂ.ಸಂ.9964484066 ನೀಡಿದ್ದಾನೆ. ವ್ಯಕ್ತಿಯೊಬ್ಬ ಇತ್ತೀಚೆಗೆ ಗೀಜಗದ ಹಕ್ಕಿಗಳನ್ನು ಒಎಲ್ಎಕ್ಸ್. ಇನ್ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಅತಿಥಿಯಾಗಿದ್ದ. ಇದಾದ ಬಳಿಕ ಬಿಎಂಟಿಸಿ ಬಸ್ ಬಿಕರಿಗಿದೆ.
2015ರ ಮಾಡೆಲ್ನ ಬಿ.ಎಂ.ಟಿ.ಸಿ ಬಸ್ ಗಂಟೆಗೆ 780 ಕಿ.ಮೀ ವೇಗದಲ್ಲಿ ಸಂಚರಿಸಲಿದೆ ಎಂದು ಹೇಳುವ ಮೂಲಕ ಸಂಸ್ಥೆಯನ್ನು ಹೀಯಾಳಿಸಿ ಅಪಹಾಸ್ಯ ಮಾಡಿದ್ದಾನೆ. ಆದರೆ ಇದು ಯಾವ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.