Untitled Document
Sign Up | Login    
Dynamic website and Portals
  
December 27, 2014

7,000 ಉಗ್ರರ ಬಂಧನಕ್ಕೆ ಪಾಕ್ ಆದೇಶ

ಇಸ್ಲಾಮಾಬಾದ್ : ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟನ್ನು ಹೊಂದಿರುವ ಸುಮಾರು 7,000 ಮಂದಿ ಶಂಕಿತ ಉಗ್ರರನ್ನು ಬಂಧಿಸುವಂತೆ ಪಾಕಿಸ್ಥಾನ ಸರ್ಕಾರ ದೇಶದ ಎಲ್ಲಾ ನಾಲ್ಕು ಪ್ರಾಂತ್ಯಗಳ ಸರ್ಕಾರಗಳಿಗೆ ಆದೇಶ ನೀಡಿದೆ.

ಸರಕಾರದ ಅಂಕಿ-ಅಂಶಗಳ ಪ್ರಕಾರ 6,777 ಶಂಕಿತ ಉಗ್ರರು ದೇಶಾದ್ಯಂತ ಕಾರ್ಯಾಚರಿಸುತ್ತಿದ್ದು ಇವರಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಪ್ರಕ್ಷುಬ್ಧ ಖೈಬರ್‌ ಪಕುಂಖ್ವಾ ಪ್ರಾಂತ್ಯದಲ್ಲಿ ಸಕ್ರಿಯರಾಗಿದ್ದಾರೆ.

ಕಳೆದ ವಾರ ತಾಲಿಬಾನಿ ಉಗ್ರರು ಪೇಶಾವರದಲ್ಲಿನ ಸೇನಾ ಶಾಲೆ ಮೇಲೆ ದಾಳಿ ನಡೆಸಿ, ಮಕ್ಕಳೂ ಸೇರಿದಂತೆ 150ಮಂದಿಯನ್ನು ಬಲಿ ತೆಗೆದುಕೊಂಡ ಬಳಿಕ ಪಾಕಿಸ್ಥಾನ ಸರ್ಕಾರ ಉಗ್ರರ ವಿರುದ್ದದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಒಳಾಡಳಿತ ಖಾತೆ ಪ್ರಾಂತೀಯ ಸರಕಾರಗಳಿಗೆ ಈ ಆದೇಶವನ್ನು ನೀಡಿದೆ.

ಸೇನೆ ಬಿಡುಗಡೆ ಮಾಡಿರುವ ಶಂಕಿತ ಉಗ್ರರ ಪಟ್ಟಿಯ ಪ್ರಕಾರ ದೇಶದಲ್ಲಿ ಒಟ್ಟು 6,777 ಶಂಕಿತರಿದ್ದು ಇವರಲ್ಲಿ 4,000 ಮಂದಿ ಖೈಬರ್‌ ಪಕುಂಖ್ವಾ ಪ್ರಾಂತ್ಯದಲ್ಲಿದ್ದರೆ ಸಿಂಧ್‌ನಲ್ಲಿ 1000, ಬಲೂಚಿಸ್ಥಾನದಲ್ಲಿ 338, ಪಂಜಾಬ್‌ನಲ್ಲಿ 1,416 ಮತ್ತು ಇಸ್ಲಾಮಾಬಾದ್‌ನಲ್ಲಿ 23 ಮಂದಿ ಶಂಕಿತ ಉಗ್ರರಿದ್ದಾರೆ. ಈ ಎಲ್ಲಾ ಶಂಕಿತ ಉಗ್ರರನ್ನು ಮುಂದಿನ 24 ತಾಸುಗಳ ಒಳಗಾಗಿ ಬಂಧಿಸುವ ಸಾಧ್ಯತೆಗಳಿವೆ ಎಂದು ಜಿಯೋ ನ್ಯೂಸ್‌ ವರದಿ ಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited