ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರನ್ನೇ ಅಮೆರಿಕದ ಇ ಕಾಮರ್ಸ್ ವೆಬ್ ಸೈಟ್ ಇಬೇ ನಲ್ಲಿ ಮಾರಾಟಕ್ಕಿಡಲಾಗಿದೆ.
ಅಪ್ರಯೋಜಕ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಎಂದು ಜಾಹೀರಾತಿನಲ್ಲಿ ಷರಾ ಬರೆದಿರುವ ಅನಾಮಿಕ ವ್ಯಕ್ತಿ ಇ ಬೇ ನಲ್ಲಿ 62 ಲಕ್ಷ ರೂಪಾಯಿ(66,200 ಪೌಂಡ್ಸ್) ಗಳಿಗೆ ಹರಾಜಿಗೆ ಇಟ್ಟಿದ್ದಾನೆ.
ಅಷ್ಟೇ ಅಲ್ಲ ಪ್ರಾಡಕ್ಟ್ ವಿವರಣೆ ಭಯಾನಕವಾಗಿದೆ. ಉಪಯೋಗಿಲಸ್ಪಟ್ಟ ಪಾಕ್ ಪ್ರಧಾನಿ ಮಾರಾಟಕ್ಕಿದ್ದಾರೆ. ಹೆಚ್ಚು ಕಾಲ ಅಗತ್ಯವಿಲ್ಲ. ಯಾವುದೇ ಸೂಚನೆ ಬೇಕಾಗಿಲ್ಲ. ಖರೀದಿದಾರರೇ ಕಲೆಕ್ಟ್ ಮಾಡಿಕೊಳ್ಳಬೇಕು. ಮಾರಾಟವಾದ ಮೇಲೆ ನಿಮಗೆ ವಿಳಾಸ ನೀಡಲಾಗುವುದು. ಖರೀದಿದಾರರೇ ಖುದ್ದಾಗಿ ಟ್ರಾನ್ಸ್ ಫೋರ್ಟ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಈ ಇಡೀ ಪ್ರಾಡಕ್ಟ್ ಮತ್ತು ಕುಟುಂಬ ವಂಶೀಯವಾಗಿ ಕುಂದಳ್ಳದ್ದು ಮತ್ತು ಭ್ರಷ್ಟತೆಯದ್ದಾಗಿದೆ. ಇದು ಯಾವುದೇ ಕಾರ್ಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಇದು ಯಾವತ್ತೂ ಕಾರ್ಯನಿರ್ವಹಿಸಲಾರದು. ಇದು ಜನ್ಮತಃ ದೋಷಪೂರಿತ ಹಾಗೂ ಭ್ರಷ್ಟವಾಗಿದೆ. ಇದನ್ನು ಖರೀದಿಸಿ, ಜೊತೆಗೆ ಮಿಸ್ಟರ್ ಶಹಬಾಜ್ ಶರೀಫ್ ಅವರನ್ನು ಉಚಿತವಾಗಿ ಪಡೆಯಿರಿ. ಈ ಐಟಂ ಉತ್ತಮವಾದದ್ದು ಮತ್ತು ನಾಟಕೀಯತೆಯಲ್ಲಿ ಪ್ರಾವೀಣ್ಯತೆ ಪಡೆದಿದೆ. ಆದರೆ ಇದರಿಂದಲೂ ಯಾವುದೇ ಉಪಯೋಗವಿಲ್ಲ ಎಂದು ಇ ಬೇ ಜಾಹೀರಾತಿನಲ್ಲಿ ವಿವರಿಸಿರುವುದಾಗಿ ತಿಳಿದುಬಂದಿದೆ.