ಬಿಹಾರ : 'ಘರ್ ವಾಪಸಿ' ಕಾರ್ಯಕ್ರಮ ನಡೆದಾಗಿನಿಂದಲೂ ದೇಶದಲ್ಲಿ ಮತಾಂತರ ರಾಜಾರೋಷವಾಗಿ ನಡೆಯುತ್ತಿದೆ. ಬಿಹಾರದ ಬೋಧ್ ಗಯಾದಲ್ಲಿ ಸುಮಾರು 40 ದಲಿತ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಬಡತನದಿಂದ ಹೊರಬರಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ದಲಿತ ಕುಟುಂಬಗಳು ತಿಳಿಸಿವೆ.
ಮತಾಂತರ ಕುರಿತು ಬಿಹಾರಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಪ್ರತಿಕ್ರಿಯಿಸಿದ್ದು ತನಿಖೆ ನಡೆಸುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಈ ಮತಾಂತರ, ಬಲವಂತವಾಗಿ ಮಾಡಲಾಗಿರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ, ತನಿಖೆ ನಡೆಸಲು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯಾದ ನಿಶಾಂತ್ ಕುಮಾರ್ ತಿವಾರಿ, ಇದೀಗ ಮತಾಂತರಗೊಂಡಿರುವ ಕುಟುಂಬದವರು ಹಲವು ವರ್ಷಗಳಿಂದ ಚರ್ಚ್ ಗಳಿಗೆ ತೆರಳುತ್ತಿದ್ದು, ಪ್ರಾರ್ಥನೆ ಸೇರಿದಂತೆ ಇತ್ಯಾದಿ ಚರ್ಚ್ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.