Untitled Document
Sign Up | Login    
Dynamic website and Portals
  
December 17, 2014

ಗೂಗಲ್ ಸರ್ಚ್ ನಲ್ಲೂ ಪ್ರಧಾನಿ ನರೇಂದ್ರ ಮೋದಿಯೇ ನಂ.1

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ 2014ನೇ ಸಾಲಿನಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯೆಂದು ಗೂಗಲ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಅಂತರ್ಜಾಲದಲ್ಲಿ ಪ್ರಸಕ್ತ ವರ್ಷ ಬಾಲಿವುಡ್ ನಟರಿಗಿಂತಲೂ ಮೋದಿ ಹೆಸರನ್ನು ಅತಿ ಹೆಚ್ಚು ಜನರು ಹುಡುಕಿದ್ದಾರೆ ಎಂದು ತಿಳಿದುಬಂದಿದೆ.

ಸರ್ಚ್ ಇಂಜಿನ್ ನಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಗಿಂತಲೂ ಅಂತರ್ಜಾಲದಲ್ಲಿ ಮೋದಿ ಜನಪ್ರಿಯರಾಗಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂತರ್ಜಾಲ ಜನಪ್ರಿಯತೆ ಗಳಿಸಿರುವ ಪ್ರಥಮ ರಾಜಕಾರಣಿ ಎಂದು ಗೂಗಲ್ ಇಂಡಿಯಾ ಸಂಸ್ಥೆ ಪ್ರಧಾನಿಯನ್ನು ಬಣ್ಣಿಸಿದೆ.

ಪ್ರತಿ ವರ್ಷವೂ ಗೂಗಲ್ ಸಂಸ್ಥೆ ತನ್ನ ಸರ್ಚ್ ಇಂಜಿನ್ ಮೂಲಕ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ, ವಿಷಯವನ್ನು Year in Search ಎಂದು ಘೋಷಿಸುತ್ತದೆ. ನರೇಂದ್ರ ಮೋದಿ ನಂತರ ಫುಟ್ ಬಾಲ್ ಪಂದ್ಯದ ಫೀಫಾ ವಿಶ್ವ ಕಪ್, ಕ್ರಿಕೆಟಿಗ ವಿರಾಟ್ ಕೋಹ್ಲಿ, ಐ.ಪಿ.ಎಲ್ ಬಗ್ಗೆ ಅತಿಹೆಚ್ಚು ಸರ್ಚ್ ಮಾಡಲಾಗಿದೆ ಎಂದು ಗೂಗಲ್ ತಿಳಿಸಿದೆ.

ಡೆಸ್ಕ್ ಟಾಪ್ ಗಳನ್ನು ಹೊರತುಪಡಿಸಿ ಸ್ಮಾರ್ಟ್ ಫೋನ್ ಗಳಿಂದಲೂ ಗೂಗಲ್ ನಿಂದ ಮಾಹಿತಿ ಪಡೆಯುವವರ ಸಂಖ್ಯೆ ಈ ಬಾರಿ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ಗೂಗಲ್ ಸರ್ಚ್ ನಲ್ಲಿಯೂ ಮೋದಿ ಪ್ರಥಮ ಸ್ಥಾನಗಳಿಸಿರುವುದು ಅಂತರ್ಜಾಲದಲ್ಲಿ ಮೋದಿ ಜನಪ್ರಿಯತೆ ಹೆಚ್ಚುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited