Untitled Document
Sign Up | Login    
Dynamic website and Portals
  
May 20, 2015

ಚೀನಾದಲ್ಲಿ ಮೋದಿ ಭಾಷಣ ವಿಚಾರ: ಕಾಂಗ್ರೆಸ್ ವಾಗ್ದಾಳಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಭಾರತದಲ್ಲಿ ನನ್ನ ಸರ್ಕಾರ ಬರುವುದಕ್ಕೂ ಮುನ್ನ, ವಿದೇಶದಲ್ಲಿನ ಭಾರತೀಯರು, ತಾವು ಭಾರತೀಯರಾಗಿದ್ದಕ್ಕೆ ನಾಚಿಕೆ ಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾದ ಶಾಂಘೈನಲ್ಲಿ ನೀಡಿದ ಹೇಳಿಕೆ ಅಂತರ್ಜಾಲ ಲೋಕದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಮೋದಿ ವಿರುದ್ಧ ಹರಿಹಾಯ್ದಿದೆ.

ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ’ಮೋದಿಇನ್ಸಲ್ಟ್ಸ್ಇಂಡಿಯಾ' ಶಿರೋನಾಮೆಯಡಿ ಸುಮಾರು 40 ಸಾವಿರ ಟ್ವೀಟ್‌ಗಳು ಹರಿದಾಡಿವೆ. 'ಮೋದಿ ಅವರು ವಿದೇಶದಲ್ಲಿ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ದೇಶದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ' ಎಂದು ಟೀಕೆ ಮಾಡಲಾಗಿದೆ.

ಆದರೆ, ಇದಕ್ಕೆ ಪ್ರತಿಯಾಗಿ ’ಮೋದಿಇಂಡಿಯಾಸ್‌ಪ್ರೈಡ್‌' ಹೆಸರಿನಲ್ಲಿ ಪ್ರತಿ ಅಭಿಯಾನವು ಟ್ವೀಟರ್‌ನಲ್ಲಿ ಆರಂಭವಾಗಿದ್ದು, "ಒಂದು ದಿನವೂ ರಜೆ ಪಡೆಯದೇ ಭಾರತಕ್ಕಾಗಿ ಕೆಲಸ ಮಾಡುತ್ತಿರುವ ಮೋದಿ ಅವರು ಭಾರತದ ಹೆಮ್ಮೆ' ಎಂದು ಬಣ್ಣಿಸಲಾಗಿದೆ.

ಮೋದಿ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌ ವಕ್ತಾರ ಸಂಜಯ್‌ ಝಾ, "ಭಾರತೀಯರನ್ನೇ ಟೀಕಿಸುವ ಮೋದಿ ಹೇಳಿಕೆ ಟ್ವೀಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವುದರಲ್ಲಿ ವಿಶೇಷವೇನಿಲ್ಲ. ಕಾರಣ, ಅವರು ಪ್ರತಿಯೊಬ್ಬ ಭಾರತೀಯನ ಸಂವೇದನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ್ತೂಬ್ಬ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, "ನೀವು (ಮೋದಿ) ಗುಜರಾತ್‌ನಲ್ಲಿ ನಡೆಸಿದ ಕುತಂತ್ರಗಳ ಹೊರತಾಗಿಯೂ, ಭಾರತೀಯರೇನು ತಮ್ಮ ಬಗ್ಗೆ ನಾಚಿಕೆ ಪಟ್ಟುಕೊಂಡಿಲ್ಲ. ನೀವು ಭಾರತವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೀರೋ, ಅದು ಅದಕ್ಕಿಂತ ಹೆಚ್ಚಿದೆ' ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಅವರು "ಮೋದಿ ಅವರಿಗೆ ನಿವಾಸಿ ಭಾರತೀಯರಿಗಿಂತ ಅನಿವಾಸಿ ಭಾರತೀಯರ ಬಗ್ಗೆಯೇ ಚಿಂತೆ ಹೆಚ್ಚಾಗಿದೆ' ಎಂದು ಕಿಡಿಕಾರಿದ್ದಾರೆ.

ಮೋದಿ ಶಾಂಘೈ ಮತ್ತು ಸೋಲ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುವ ವೇಳೆ, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ, ವಿದೇಶದಲ್ಲಿನ ಭಾರತೀಯರು, ತಾವು ಭಾರತೀಯರಾಗಿರುವುದಕ್ಕೆ ನಾಚಿಕೆ ಪಡುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಸುಧಾರಿಸಿದೆ. ಹಿಂದೆ ನಾಚಿಕೆ ಪಟ್ಟವರು ಕೂಡಾ ಇದೀಗ ತಾವು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡುತ್ತಿದ್ದಾರೆ ಎಂದು ಹೇಳಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited