ಲಖ್ನೌ : 'ಉತ್ತರ ಪ್ರದೇಶ'ದಲ್ಲಿ ಮುಸ್ಲಿಂರನ್ನು ಹಿಂದೂ ಧರ್ಮ&id=16556'>ಹಿಂದೂ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಎದುರಿಸುತ್ತಿರುವ ಧರ್ಮ ಜಾಗರಣ ಮಂಚ್ ಮೇಲೆ ಡಿ.11ರಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮ&id=16556'>ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದರು. ಮುಸ್ಲಿಮರಿಗೆ ಆಮಿಷವೊಡ್ಡಿ ಬಲವಂತವಾಗಿ ಹಿಂದೂ ಧರ್ಮ&id=16556'>ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಧರ್ಮ ಜಾಗರಣ್ ಮಂಚ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಚೇರಿ ಮೇಲೆ ಪೊಲೀಸ್ ದಾಳಿ ನಡೆದಿದೆ.
ಇನ್ನು ಡಿ.11ರಂದು ಪ್ರಾರಂಭವಾದ ಸಂಸತ್ ಕಲಾಪದಲ್ಲೂ ಮತಾಂತರದ ವಿಷಯದ ಗದ್ದಲ ಉಂಟಾಗಿದೆ. ಒತ್ತಾಯ ಪೂರ್ವಕ ಮತಾಂತರ ಮಾಡಿರುವ ಧರ್ಮ ಜಾಗರಣ ಮಂಚ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.