Untitled Document
Sign Up | Login    
Dynamic website and Portals
  
December 10, 2014

ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಕಡ್ಡಾಯಗೊಳಿಸಬೇಕು: ರಾಜ್‌ನಾಥ್ ಸಿಂಗ್

ರಾಜನಾಥ್ ಸಿಂಗ್ ರಾಜನಾಥ್ ಸಿಂಗ್

ನವದೆಹಲಿ : ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ-ಭೌಗೋಳಿಕ ಸ್ಥಾನ ನಿರ್ದೇಶಕ) ವ್ಯವಸ್ಥೆ ಅಳವಡಿಕೆ ಕಡ್ಡಾಯಗೊಳಿಸಬೇಕೆಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ.

ದೆಹಲಿಯ ಉಬರ್ ಕ್ಯಾಬ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವಾ ಸಂಪರ್ಕ ವಾಹನಗಳ ನಿಯಮ ನಿಬಂಧನೆಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಮಹಿಳೆಯರ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಕೇಂದ್ರ ಸರ್ಕಾರ ಮಹಿಳಾ ಸಹಾಯವಾಣಿ ಸಂಪರ್ಕ ವ್ಯವಸ್ಥೆಯನ್ನೂ ಹೆಚ್ಚಿಸಿದೆ. ಈ ಹಿಂದೆ ಮಹಿಳಾ ಸಹಾಯವಾಣಿ ನಂ.1091 ಗೆ ನಾಲ್ಕೇ ನಾಲ್ಕು ಲೈನ್ ಇತ್ತು. ಈಗ ಲೈನ್‌ಗಳ ಸಂಖ್ಯೆಯನ್ನು 10ಕ್ಕೇರಿಸಲಾಗಿದೆ. ಅದೇ ವೇಳೆ ಸಹಾಯವಾಣಿ ಸಂಖ್ಯೆ 100 ಕ್ಕೆ 60 ಲೈನ್‌ಗಳು ಇದ್ದವು. ಈಗ ಲೈನ್‌ಗಳ ಸಂಖ್ಯೆಯನ್ನೂ ನೂರಕ್ಕೇರಿಸಲಾಗಿದೆ ಎಂದು ರಾಜ್‌ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ರಸ್ತೆ, ಪಾರ್ಕ್ ಹಾಗೂ ಸಾರ್ವಜನಿಕ ಪ್ರದೇಶಗಳು ಸೇರಿದಂತೆ 255 ನಿರ್ಜನ ಹಾಗೂ ಸೂಕ್ಷ್ಮ ಪ್ರದೇಶಗಳಿವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇಂಥಾ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷೆಗಾಗಿ ಪೊಲೀಸರನ್ನು ನಿಯೋಜಿಸಲಾಗುವುದು. ಹಾಗೆಯೇ ಮಹಿಳೆಯರಿಗೆ ಸ್ವಯಂ ರಕ್ಷಣಾ ಕಲೆಗಳಲ್ಲಿ ತರಬೇತಿ ನೀಡಲುಸರ್ಕಾರ ಮುಂದಾಗಿದೆ. ಆದಾಗ್ಯೂ, ಪ್ರಸ್ತುತ ವರ್ಷ ದೆಹಲಿಯಲ್ಲಿ ಒಟ್ಟು 14,373 ಮಹಿಳೆಯರು ಸ್ವಯಂ ರಕ್ಷಣಾ ಕಲೆಯಲ್ಲಿ ಪರಿಣತರಾಗಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited