Untitled Document
Sign Up | Login    
Dynamic website and Portals
  
November 10, 2014

ಶಿಂಧೆ ಪುತ್ರಿ ಪ್ರಣತಿ ಶಿಂಧೆಗೆ ಎಂಐಎಂ ನಿಂದ ನೊಟೀಸ್

ನವದೆಹಲಿ : 'ಎಂಐಎಂ' ಪಕ್ಷದ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕಿ ಪ್ರಣತಿ ಶಿಂಧೆಗೆ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಂ.ಐ.ಎಂ) ನೊಟೀಸ್ ಜಾರಿ ಮಾಡಿದೆ.

ಎಂಐಎಂ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಎಂಐಎಂ, ಪ್ರಣತಿ ಶಿಂಧೆ ಕೂಡಲೇ ಕ್ಷಮೆಯಾಚಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಕಳೆದ ವಾರ ಸೋಲ್ಲಾಪುರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಣತಿ ಶಿಂಧೆ, ಎಂಐಎಂ ಸಂಘಟನೆ ಧರ್ಮಗಳ ನಡುವೆ ಒಡಕು ತರುವ ಕಾರ್ಯ ಮಾಡುತ್ತಿದೆ. ಯಾವುದೇ ಪಕ್ಷವಾಗಲಿ ಧರ್ಮಗಳ ನಡುವೆ ಒಡಕು ತರಲೆತ್ನಿಸಿದರೆ ಅದು ಭಾರತದ ವಿರೋಧಿಯಾಗಿರುತ್ತದೆ ಎಂದು ಹೇಳಿದ್ದರು. ಅಲ್ಲದೇ ಪಕ್ಷವನ್ನು ನಿಷೇಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಎಂಟು ದಿನದೊಳಗಾಗಿ ಪ್ರಣತಿ ಶಿಂಧೆ ಕ್ಷಮೆಯಾಚಿಸಬೇಕು. ಇಲ್ಲವಾದರೆ, ನ್ಯಾಯಾಲಯದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗವುದು ಎಂದು ಗಡುವು ನೀಡಿದೆ. ಹಿಂದೂಗಳನ್ನು ಕೊಲ್ಲುತ್ತೇವೆ ಎಂದು ಹೇಳಿದ್ದ ಎಂಐಎಂ ಮುಖಂಡ ಅಕ್ಬರುದ್ದೀನ್ ಒವೈಸಿ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited