ನವದೆಹಲಿ : ಕೇಂದ್ರ ಎನ್.ಡಿ.ಎ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾರ್ಯಗಳು ಆರಂಭವಾಗಿದ್ದು, ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಅವರಿಗೆ ಸ್ವತಂತ್ರ ಖಾತೆ (ರಾಜ್ಯ ಸಚಿವ) ಸ್ಥಾನ ನೀಡುವುದು ಖಚಿತವಾಗಿದೆ.
ರೂಡಿ ಅವರು ಬಿಹಾರದ ಸರನ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕಿರುವ ಬಗ್ಗೆ ಟ್ವಿಟ್ ಮಾಡಿರುವ ರಾಜಿವ್ ಪ್ರತಾಪ್ ರೂಡಿ, ಸ್ವತಂತ್ರ ಖಾತೆ ಸಚಿವನಾಗುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುವ ಮೂಲಕ ದೇಶ ಸೇವೆ ಮಾಡಲು ನನಗೆ ಸುಯೋಗ ಕೂಡಿಬಂದಿದೆ ಎಂದು ಹೇಳಿದ್ದಾರೆ.
ಇನ್ನು ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನವದೆಹಲಿಯಲ್ಲಿ ಮಾತನಾಡಿದ್ದು, ಯಾವ ಖಾತೆ ನಿಡಿದರೂ ಸಮರ್ಪಕವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಶಿವಸೇನೆಯ ಅನಿಲ್ ದೇಸಾಯಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಶಿವಸೇನೆಯ ಮುಖಂಡ ಸುರೇಶ್ ಪ್ರಭುಗೆ ಕೇಂದ್ರ ಸಚಿವ ಸ್ಥಾನವಿಲ್ಲ, ಬದಲಾಗಿ ಕ್ಯಾಬಿನೇಟ್ ದರ್ಜೆಯ ಸಲಹೆಗಾರರ ಜವಾಬ್ದಾರಿ ನೀಡಲಾಗುವುದು ಎಂದು ತಿಳಿದುಬಂದಿದೆ.