Untitled Document
Sign Up | Login    
Dynamic website and Portals
  
November 3, 2014

ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ವಿಫ್ಟ್, ಡ್ಯಾಟ್ಸನ್ ಕಾರುಗಳು ಫೇಲ್

ಅಪಘಾತ ಪರೀಕ್ಷೆ ಅಪಘಾತ ಪರೀಕ್ಷೆ

ನವದೆಹಲಿ : ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಹಾಗೂ ನಿಸಾನ್ ಕಂಪನಿಯ ಡ್ಯಾಟ್ಸನ್ ಕಾರುಗಳು ಜಾಗತಿಕ ಎನ್.ಸಿ.ಎ.ಪಿ (ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್) ನಡೆಸಿದ ಅಪಘಾತ ಪರೀಕ್ಷೆ (ಕ್ರ್ಯಾಶ್ ಟೆಸ್ಟ್)ಯಲ್ಲಿ ಕಳಪೆ ಪ್ರದರ್ಶನ ನೀಡಿವೆ.

ಎನ್.ಸಿ.ಎ.ಪಿ ನಡೆಸಿರುವ ಪರೀಕ್ಷೆ ಪ್ರಕಾರ, ಸ್ವಿಫ್ಟ್ ಹಾಗೂ ಡ್ಯಾಟ್ಸನ್ ಕಾರುಗಳಲ್ಲಿ 64 ಕಿ.ಮಿ ವೇಗದಲ್ಲಿ ಚಲಿಸುವಾಗ ಮುಂಭಾಗದಲ್ಲಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದರೆ ಒಳಗೆ ಕುಳಿತಿರುವ ಪ್ರಯಾಣಿಕರ ಸುರಕ್ಷತೆ ಇರುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಪರೀಕ್ಷೆಯ ವೇಳೆ ನೀಡಲಾಗುವ ಸ್ಟಾರ್ ಮಾಪನದಲ್ಲಿ 'ಸೊನ್ನೆ' ಅಂಕ ಪಡೆದಿದೆ.

ಲ್ಯಾಟಿನ್ ಅಮೆರಿಕಾಗೆ ರಫ್ತಾಗುವ ಮಾಡೆಲ್ ಹಾಗೂ ಭಾರತದಲ್ಲೇ ಮಾರಾಟವಾಗುವ ಸ್ವಿಫ್ಟ್ ನ ಮಾಡೆಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎರಡೂ ಮಾಡೆಲ್ ಗಳು ಪರೀಕ್ಷೆಯಲ್ಲಿ ವಿಫಲವಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಮಾರುತಿ ಆಲ್ಟೊ 800, ಫೋರ್ಡ್ ಫಿಗೋ, ಟಾಟಾ ನ್ಯಾನೋ, ಹುಂಡೈ ಐ10, ವೋಕ್ಸ್ ವ್ಯಾಗನ್ ಪೋಲೊ ಕಾರುಗಳು ಇತ್ತೀಚೆಗಷ್ಟೇ ನಡೆದ ಎನ್.ಸಿ.ಎ.ಪಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದವು. ಎನ್.ಸಿ.ಎ.ಪಿ ಪ್ರಕಾರ ಈ ಕಾರುಗಳು ಅಪಘಾತದಲ್ಲಿ ಬಳಕೆದಾರರ ಜೀವಕ್ಕೇ ಅಪಾಯ ಎಂದು ಹೇಳಿದೆ.

ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ಕಾರುಗಳಲ್ಲಿ ಆಸ್ಟ್ರೇಲಿಯಾ, ಜಪಾನ್, ಚೈನಾ, ಮಲೇಶಿಯಾ, ಯೂರೋಪಿಯನ್ ಸಂಘಟನೆ ಒಳಗೊಂಡಂತೆ ಮುಂತಾದ ದೇಶಗಳಲ್ಲಿ ಜಾರಿಗೆ ತಂದಿರುವ ಪ್ರಾಥಮಿಕ ಸುರಕ್ಷತೆಯ ಕ್ರಮಗಳು ಕೂಡ ಇಲ್ಲ ಎಂದು ತಿಳಿದುಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited