Untitled Document
Sign Up | Login    
Dynamic website and Portals
  
October 29, 2014

ನ.2ರಂದು ಪ್ರಧಾನಿ ಮೋದಿ ಮನ್ ಕೀ ಬಾತ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಭಾಷಣ ಮನ್ ಕೀ ಬಾತ್ ನ ಎರಡನೇ ಆವೃತ್ತಿ ನ.2ರಂದು ಪ್ರಸಾರವಾಗಲಿದೆ.

ಅ.3ರಂದು ಮೊದಲ ಬಾರಿಯ ಬಾನುಲಿ ಭಾಷಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಎರಡನೇ ಭಾಷಣಕ್ಕೆ ಪ್ರಧಾನಿ ಮೋದಿ ಸಜ್ಜಾಗಿದ್ದಾರೆ.

ಜನರ ಪ್ರತಿಕ್ರಿಯೆ ಹಾಗೂ ಉತ್ತಮ ಆಡಳಿತಕ್ಕೆ ನೀಡಿದ ಸಲಹೆಗಳನ್ನು ಆಧರಿಸಿ ನ.2ರಂದು ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ನೀಡಲಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಜನರ ಅದ್ಭುತ ಪ್ರತಿಕ್ರಿಯೆ, ಒಳನೋಟ ಬಹಳ ಖುಷಿತಂದಿದ್ದು, ಅವೆಲ್ಲವನ್ನು ನಿಮ್ಮಜತೆ ಹಂಚಿಕೊಳ್ಳಲಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಅಲ್ಲದೇ MyGov ಮುಕ್ತ ವೇದಿಕೆ ಮೂಲಕ ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಿ. ನಾನು ಅವುಗಳನ್ನು ಓದುತ್ತೇನೆ. ನನ್ನ ರೇಡಿಯೋ ಕಾರ್ಯಕ್ರಮದ ವೇಳೆ ಅವುಗಳಲ್ಲಿ ಕೆಲವನ್ನು ಹಂಚಿಕೊಳ್ಳೋಣ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸ್ವಚ್ಛ ಭಾರತ್‌ ಅಭಿಯಾನ, ಕೃಷಿ, ನೀರಾವರಿ ಸಮಸ್ಯೆಗಳು, ಮಹಿಳಾ ಸಶಕ್ತೀಕರಣ ಮತ್ತು ಕೌಶಲ್ಯ ಭಾರತ ಕುರಿತು ಸಾರ್ವಜನಿಕರು ನೀಡಿದ ನೂರಾರು ಸಲಹೆಗಳನ್ನು ಓದಿರುವುದಾಗಿ ತಿಳಿಸಿದ ಮೋದಿ, ಉತ್ತಮ ಆಡಳಿತ ಕುರಿತಂತೆ ಸಲಹೆ-ಸೂಚನೆಗಳು, ಹೊಸ ಯೋಜನೆಗಳು, ಕಲ್ಪನೆಗಳನ್ನು ಹಂಚಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited