Untitled Document
Sign Up | Login    
Dynamic website and Portals
  
October 21, 2014

ಹರ್ಯಾಣ ಪ್ರಥಮ ಬಿಜೆಪಿ ಸಿ.ಎಂ ಆಗಿ ಖತ್ತರ್ ಆಯ್ಕೆ

ಹರ್ಯಾಣ ಪ್ರಥಮ ಬಿಜೆಪಿ ಸಿ.ಎಂ ಆಗಿ ಖತ್ತರ್ ಆಯ್ಕೆ

ಚಂಡೀಗಢ : 'ಹರ್ಯಾಣ'ದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖತ್ತರ್ ಆಯ್ಕೆಯಾಗಿದ್ದಾರೆ. ಅ21ರಂದು ಚಂಡೀಗಢದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಖತ್ತರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಹರ್ಯಾಣದಲ್ಲಿ ಪ್ರಥಮ ಬಾರಿಗೆ ಬಿಜೆಪಿಗೆ ಬಹುಮತ ದೊರೆತಿದ್ದು ಅಭಿಮನ್ಯು ಸಿಂಗ್ ಸಿಂಧು ಹಾಗೂ ಮನೋಹರ್ ಲಾಲ್ ಖತ್ತರ್ ಮುಖ್ಯಮಂತ್ರಿ ಹುದ್ದೆ ರೇಸ್ ನಲ್ಲಿದ್ದರು. ಆದರೆ ರಾಜಕೀಯವಾಗಿ ಹರ್ಯಾಣದಲ್ಲಿ ಜಾಟ್ ಸಮುದಾಯ ನಿರ್ಣಾಯಕವಾಗಿದ್ದು ಕಳೆದ 10 ವರ್ಷಗಳಿಂದ ಅದೇ ಸಮುದಾಯಕ್ಕೆ ಸೇರಿದವರೇ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಈ ಬಾರಿಯೂ ಜಾಟ್ ಯೇತರ ಸಮುದಾಯದವರಾದ ಮನೋಹರ್ ಲಾಲ್ ಖತ್ತರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಮನೋಹರ್ ಲಾಲ್ ಖತ್ತರ್ ಅವರು ಹರ್ಯಾಣದ ಕರ್ನಲ್ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ 24ನೇ ವಯಸ್ಸಿನಿಂದಲೇ ಆರ್.ಎಸ್.ಎಸ್ ನಲ್ಲಿ ಸಕ್ರಿಯವಾಗಿರುವ ಖತ್ತರ್ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದ ಪ್ರಚಾರ ಸಮೂಹಕ್ಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮನೋಹರ್ ಲಾಲ್, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ. ಇದರೊಂದಿಗೆ ಕಳೆದೆರಡು ದಿನಗಳಿಂದ ಹರ್ಯಾಣದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited