Untitled Document
Sign Up | Login    
Dynamic website and Portals
  
October 15, 2014

ವಿಧಾನಸಭಾ ಚುನಾವಣೆ: ಹರ್ಯಾಣದಲ್ಲಿ ಶೇ.68,ಮಹಾರಾಷ್ಟ್ರದಲ್ಲಿ ಶೇ.55ರಷ್ಟು ಮತದಾನ

ನವದೆಹಲಿ : ಲೋಕಸಭಾ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಸತ್ವ ಪರೀಕ್ಷೆ ಎಂದೇ ಬಿಂಬಿಸಲ್ಪಟ್ಟ 'ಮಹಾರಾಷ್ಟ್ರ' ಹಾಗೂ ಹರ್ಯಾಣ ವಿಧಾನಸಭೆಗೆ ನಡೆದ ಚುನಾವಣೆ ಮುಕ್ತಾಯಗೊಂಡಿದೆ.

ಸಂಜೆ 5 ಗಂಟೆ ವರೆಗೂ ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಶೇ.68ರಷ್ಟು ಮತದಾನ ನಡೆದಿದೆ. ಹರ್ಯಾಣದ ಯಮುನಾನಗರದಲ್ಲಿ ಅತಿ ಹೆಚ್ಚು ಮತದಾನ(ಶೇ.75)ರಷ್ಟು ನಡೆದಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಶೇ.55ರಷ್ಟು ಮತದಾನ ನಡೆದಿದೆ.

ಹರ್ಯಾಣಸಿರ್ಸಾ ವಿಧಾನಸಭಾ ಕ್ಷೇತ್ರದ ಮೋಡಿಯಾ ಖೇಡಾ ಮತಗಟ್ಟೆಯಲ್ಲಿ ಬಿಜೆಪಿ ಮತ್ತು ಐಎನ್ ಎಲ್ ಡಿ ಕಾರ್ಯಕರ್ತರ ನಡುವೆ 3 ಬಾರಿ ಘರ್ಷಣೆ ಸಂಭವಿಸಿದ್ದನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆದೆ.

ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಈ ಚುನಾವಣೆಯಲ್ಲಿ ಉಭಯ ರಾಜ್ಯಗಳಲ್ಲೂ ಬಿಜೆಪಿಗೆ ಬಹುಮತ ದೊರೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳಿಂದ ತಿಳಿದುಬಂದಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಳ್ಳಲಿದ್ದು ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited