ವಿಶಾಖಪಟ್ಟಣ : ದೇಶೀಯವಾಗಿ ನಿರ್ಮಿಸಲಾಗಿರುವ ಗುಪ್ತ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆ ಐ.ಎನ್.ಎಸ್ ಕಮೋತ್ರವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಆ.23ರಂದು ಲೋಕಾರ್ಪಣೆ ಮಾಡಿದರು.
ನೌಕೆಯ ಶೇ.90ರಷ್ಟು ಭಾಗ ದೇಶೀಯವಾಗಿಯೇ ನಿರ್ಮಿತವಾಗಿದೆ. ಜಿ.ಆರ್.ಎಸ್.ಇ ಯಿಂದ ನಿರ್ಮಿತವಾಗಿರುವ ನಾಲ್ಕು ಯುದ್ಧನೌಕೆಯಲ್ಲಿ ಐ.ಎನ್.ಎಸ್. ಕಮೋತ್ರ ಅತ್ಯಂತ ಆತ್ಯಾಧುನಿಕವಾಗಿದೆ. ಆ.23ರಂದು ಜಿ.ಆರ್.ಎಸ್.ಇ ಯಿಂದ ನಿರ್ಮಿತವಾಗಿರುವ ಯುದ್ಧನೌಕೆಯನ್ನು ಔಪಚಾರಿಕವಾಗಿ ಲೋಕಾರ್ಪಣೆ ಮಾಡಲಾಗಿದೆ.
ಐ.ಎನ್.ಎಸ್ ಕಮೋತ್ರ, ಹೈಟೆನ್ಸೈಲ್ ಸ್ಟೀಲ್ ನಿಂದ ಸ್ವದೇಶವಾಗಿ ನಿರ್ಮಿತವಾಗಿರುವ ಪ್ರಥಮ ಯುದ್ಧನೌಕೆಯಾಗಿದೆ. ಐ.ಎನ್.ಎಸ್ ಕಮೋತ್ರ, ಕಡಿಮೆ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ(surface-to-air) ಜಿಗಿಯುವ ಕ್ಷಿಪಣಿ, ಇಂಟೆಗ್ರಾಲ್ ಜಲಾಂತರ್ಗಾಮಿ ವಿರೋಧಿ ಯುದ್ಧ ಹೆಲಿಕಾಪ್ಟರ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಯುದ್ಧ ನೌಕೆ ಲೋಕಾರ್ಪಣೆ ಮಾಡಿ ಮಾತನಾಡಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಐ.ಎನ್.ಎಸ್ ಕಮೋತ್ರ ದೇಶಕ್ಕಾಗಿ ಸುದೀರ್ಘ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.