ಜಾರ್ಖಂಡ್ : 'ಸ್ವಾತಂತ್ರ್ಯ ದಿನಾಚರಣೆ' ಅಂಗವಾಗಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಜಾರ್ಖಂಡ್ ನ ರಾಜ್ಯಪಾಲರು ಅಸ್ವಸ್ಥರಾದ ಘಟನೆ ನಡೆದಿದೆ.
ಧ್ವಜಾರೋಹಣ ನೆರವೇರಿಸಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥರಾಗಿ ಕುಸಿದುಬಿದ್ದ ರಾಜ್ಯಪಾಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯಪಾಲ ಸಯೀದ್ ಅಹಮದ್ ಅವರಿಗೆ ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇತ್ತೀಚಿನ ವರದಿ ಪ್ರಕಾರ, ರಾಜ್ಯಪಾಲರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು ರಾಂಚಿಯಲ್ಲಿರುವ ರಾಜಭವನಕ್ಕೆ ಕರೆದೊಯ್ಯಲಾಗಿದೆ. ದುಮ್ಕಾ, ಜಾರ್ಖಂಡ್ ರಾಜ್ಯದ 2ನೇ ರಾಜಧಾನಿಯಾಗಿದ್ದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯಪಾಲರು ಜನತೆಯನ್ನುದ್ದೇಶಿಸಿ ಮಾತನಾಡುವ ಸಂಪ್ರದಾಯ ನಡೆದುಬಂದಿದೆ.