ನವದೆಹಲಿ : ಪೆಟ್ರೋಲ್ ದರ ಇಳಿಕೆಯಾಗಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಆ.13ರಂದು ಟ್ವೀಟ್ ಮಾಡಿದ್ದಾರೆ.
ನಾಳೆ (ಗುರುವಾರ) ಮಧ್ಯರಾತ್ರಿಯಿಂದ ಪ್ರತಿ ಲೀಟರ್ ಗೆ 1.89-2.38 ರೂ. ಇಳಿಕೆಯಾಗಲಿದ್ದು ಸ್ವಾತಂತ್ರ್ಯ ದಿನಾಚರಣೆ ವೇಳೆ ವಾಹನ ಮಾಲಿಕರಿಗೆ ಸಿಹಿ ಸುದ್ದಿ ದೊರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ದರ ಇಳಿಕೆಯಾಗಲಿದೆ.
ಹದಿನೈದು ದಿನಗಳಿಗೊಮ್ಮೆ ಇಂಧನದ ದರ ಪರಿಷ್ಕರಣೆಯಾಗುತ್ತದೆ. ಅದರ ಪ್ರಕಾರ ಆ.15ಕ್ಕೆ ದರ ಪರಿಷ್ಕರಿಸಬೇಕಾಗುತ್ತದೆ. ಪೆಟ್ರೋಲ್ ದರ ಸೆಪ್ಟೆಂಬರ್ 1ಕ್ಕೆ ಪರಿಷ್ಕೃತವಾಗಲಿದೆ. ಆ.1ರಂದು ಪೆಟ್ರೋಲ್ ದರ ಇಳಿಕೆ ಮಾಡಲಾಗಿತ್ತು.
ಉಕ್ರೇನ್ ಮತ್ತು ಇರಾಕ್ ಬಿಕ್ಕಟ್ಟಿನಿಂದ ತೈಲ ಸರಬರಾಜಿಗೆ ಧಕ್ಕೆಯಾಗುವ ಆತಂಕ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರಗಳು ಇಳಿದಿವೆ.