Untitled Document
Sign Up | Login    
Dynamic website and Portals
  
August 11, 2014

ಇಂಗ್ಲೆಂಡ್ ನಲ್ಲಿರುವವರು ಇಂಗ್ಲೀಷರು, ಹಿಂದುಸ್ತಾನದಲ್ಲಿರುವವರು ಹಿಂದೂಗಳೇಕಲ್ಲ?

ಮೋಹನ್ ಭಾಗವತ್ ಪ್ರಶ್ನೆ

ಮೋಹನ್ ಭಾಗವತ್ ಮೋಹನ್ ಭಾಗವತ್

ಕಟಕ್ : ಇಂಗ್ಲೆಂಡ್ ನಲ್ಲಿ ವಾಸಿಸುವವರು ಇಂಗ್ಲೀಷರು, ಜರ್ಮನ್ ನಲ್ಲಿ ವಾಸಿಸುವವರು ಜರ್ಮನ್ನರು, ಅಮೆರಿಕದಲ್ಲಿ ವಾಸಿಸುವವರು ಅಎರಿಕನ್ನರು, ಆದರೆ ಹಿಂದುಸ್ತಾನದಲ್ಲಿ ವಾಸಿಸುವವರು ಹಿಂದೂಗಳೇಕಲ್ಲ ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.

ಭಾರತದಲ್ಲಿರುವ ಎಲ್ಲರ ಸಾಂಸ್ಕೃತಿಕತೆ ಹಿಂದುತ್ವವಾಗಿದ್ದು, ಈ ದೇಶದಲ್ಲಿ ವಾಸಿಸುವ ಎಲ್ಲರೂ, ಅದರ ಸಂತತಿಯೇ ಆಗಿದ್ದಾರೆ. ಅಲ್ಲದೇ ತಲೆತಲಾಂತರದಿಂದ ಈ ದೇಶದಲ್ಲಿ ಹಲವು ಭಿನ್ನತೆ ಇದ್ದರೂ, ಹಿಂದುತ್ವ ಎಂಬುದು ಇಡೀ ದೇಶವನ್ನು ಒಂದುಗೂಡಿಸಿದೆ. ಆದರೆ ಹಿಂದುತ್ವ ಎಂಬುದನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಕೋಮುವಾದ ಎಂಬ ಹಣೆಪಟ್ಟಿಯನ್ನು ಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದುತ್ವ ಎಂಬುದು ಒಂದು ಜೀವನ ರೀತಿ. ಹಿಂದೂಗಳು ಯಾವುದೇ ದೇವರನ್ನಾದರೂ ಆರಾಧಿಸಬಹುದು ಅಥವಾ ಆರಾಧಿಸದೆಯೂ ಇರಬಹುದು ಎಂದಿದ್ದಾರೆ.

ಸ್ವಾಮಿ ವಿವೇಕಾನಂದರು ಯಾವುದೇ ದೇವರನ್ನು ಪೂಜಿಸುತ್ತಿರಲಿಲ್ಲ ಸ್ವಯಂ ನಂಬಿಕೆ ಇರುವ ನಾಸ್ತಿಕನೊಬ್ಬ ಯಾರನ್ನೂ ಪೂಜಿಸಬೇಕೆಂದಿಲ್ಲ. ಹಾಗೊಂದುವೇಳೆ ನಂಬಿಕೆ ಇಲ್ಲದಿದ್ದರೆ, ಆತ ನಾಸ್ತಿಕನೂ ಆಗಲಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited