Untitled Document
Sign Up | Login    
Dynamic website and Portals
  
August 8, 2014

ಪ್ರಧಾನಿ ಮೋದಿ-ಹಗೆಲ್ ಭೇಟಿ: ಬೃಹತ್ ರಕ್ಷಣಾ ಒಪ್ಪಂದದ ನಿರೀಕ್ಷೆಯಲ್ಲಿ ಅಮೆರಿಕಾ

ಅಮೆರಿಕಾ  ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್-ಪ್ರಧಾನಿ ನರೇಂದ್ರ ಮೋದಿ ಭೇಟಿ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್-ಪ್ರಧಾನಿ ನರೇಂದ್ರ ಮೋದಿ ಭೇಟಿ

ನವದೆಹಲಿ : ಭಾರತಕ್ಕೆ 3 ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಕ್ಷಣಾ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಉಭಯ ದೇಶಗಳ ನಡುವೆ ಇರುವ ರಕ್ಷಣಾ ಬಾಂಧವ್ಯ ವೃದ್ಧಿಗೆ ಮಾತುಕತೆ ವೇಳೆ ಒತ್ತು ನೀಡಲಾಗಿದೆ. ಅತಿಭಾರ ಎತ್ತುವ ಸಾಮರ್ಥ್ಯ ಹೊಂದಿರುವ(heavy-lift) ಹೆಲಿಕಾಫ್ಟರ್ ಗಳು, ಯುದ್ಧ ಹೆಲಿಕಾಫ್ಟರ್ ಗಳು, ಸಬ್ಮೆರೀನ್ ನಿರೋಧಕ ಜೆಟ್(anti-submarine jets) ಸಾರಿಗೆ ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆದಿದೆ.

ಭಾರತ ಈಗಾಗಲೇ ಬೋಯಿಂಗ್ ನಿರ್ಮಿತ ಅಪಾಚೆ ಗನ್ ಶಿಪ್ ಹೆಲಿಕಾಫ್ಟರ್ ಹಾಗೂ 22 ಚಿನೂಕ್ ಹೆಲಿಕಾಫ್ಟರ್ ಗಳನ್ನು ಖರೀದಿಸಲು ಉತ್ಸುಕವಾಗಿದ್ದು, ರಕ್ಷಣಾ ಸಚಿವ ಅರುಣ್ ಜೇಟ್ಲಿ ಹಾಗೂ ಚಕ್ ಹಗೆಲ್ ಅವರ ಭೇಟಿ ವೇಳೆ ಈ ಬಗ್ಗೆ ಅಂತಿಮ ಚರ್ಚೆ ನಡೆಸಲಾಗುತ್ತದೆ.

ಈಗಾಗಲೇ ಪ್ರಸ್ತಾಪಿಸಿರುವ ಹೆಲಿಕಾಫ್ಟರ್ ಗಳ ಜೊತೆಗೆ ಭಾರತ ಸರ್ಕಾರ, 39 ಎಎಚ್ 64D ಅಪಾಚೆ ಹೆಲಿಕಾಪ್ಟರ್ಗಳನ್ನು ಖರೀದಿಸುವಂತೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ಸಂದರ್ಭದಲ್ಲಿ, ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಭಾರತ ಸರ್ಕಾರವನ್ನು ಮನವೊಲಿಸುವ ನಿರೀಕ್ಷೆ ಇದೆ.

ಅತಿ ಹೆಚ್ಚು ಭಾರ ಕೊಂಡೊಯ್ಯಬಲ್ಲ ಅವಳಿ ರೋಟರ್ ಹೊಂದಿರುವ ಸಿಎಚ್-47F ಚಿನುಕ್ ಹೆಲಿಕಾಫ್ಟರ್ ಗಳನ್ನು ಭಾರತೀಯ ವಾಯುಪಡೆಗಾಗಿ ಖರೀದಿಸುವ ಒಪ್ಪಂದದ ಬಗ್ಗೆಯೂ ಅಂತಿಮ ಹಂತದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಒಟ್ಟಾರೆ ಹಗೆಲ್ ಭಾರತ ಭೇಟಿ ವೇಳೆ ರಕ್ಷಣಾ ಉಪಕರಣಗಳ ಖರೀದಿ ಒಪ್ಪಂದದ ಬಗ್ಗೆ ಮಾತುಕತೆ ಯಶಸ್ವಿಯಾದರೆ ಅಮೆರಿಕಾಗೆ ಹಲವು ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ಯಶಸ್ವಿಯಾಗಲಿದೆ.

ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಹಗೆಲ್, ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶ, ವಿಶ್ವದ ಹೊಸ ವ್ಯವಸ್ಥೆಯನ್ನು ರೂಪಿಸಲು ಅತಿಮುಖ್ಯ ಎಂದು ಹೇಳಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited