Untitled Document
Sign Up | Login    
Dynamic website and Portals
  
August 8, 2014

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿ ಮಾಡಿದ ಯು.ಎಸ್ ರಕ್ಷಣಾ ಕಾರ್ಯದರ್ಶಿ

ಅಮೆರಿಕಾ ರಕ್ಷಣಾ ಕಾರ್ಯದರ್ಶಿ-ಸುಷ್ಮಾ ಸ್ವರಾಜ್ ಭೇಟಿ ಅಮೆರಿಕಾ ರಕ್ಷಣಾ ಕಾರ್ಯದರ್ಶಿ-ಸುಷ್ಮಾ ಸ್ವರಾಜ್ ಭೇಟಿ

ನವದೆಹಲಿ : 'ಅಮೆರಿಕಾ' ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್ ಭಾರತಕ್ಕೆ ಆಗಮಿಸಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆ.8ರಂದು ಭೇಟಿ ಮಾಡಿದ್ದಾರೆ. ಉಭಯ ದೇಶಗಳ ಮಿಲಿಟರಿ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡಿಸಿದ್ದಾರೆ.

ಹಗೆಲ್ ಅವರು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಅರುಣ್ ಜೇಟ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರನ್ನು ಭೇಟಿ ಮಾಡಲಿದ್ದಾರೆ. ಸುಷ್ಮಾ ಸ್ವರಾಜ್ ಅವರು ಮ್ಯಾನ್ಮಾರ್ ಗೆ ತೆರಳುವ ಕಾರ್ಯಕ್ರಮವಿದ್ದಿದ್ದರಿಂದ, ಹಗೆಲ್ ಅವರು ಮೊದಲು ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಯು.ಎಸ್ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹಗೆಲ್ ಭಾರತಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿರುವ ಹಗೆಲ್, ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧ ಹಾಗೂ ರಕ್ಷಣಾ ಹಾರ್ಡ್ ವೇರ್ ಸಹಭಾಗಿತ್ವದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆ.1ರಂದು ಯು.ಎಸ್ ಕಾರ್ಯದರ್ಶಿ ಜಾನ್ ಕೆರ್ರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಚಕ್ ಹಗೆಲ್ ಭಾರತಕ್ಕೆ ಆಗಮಿಸಿದ್ದಾರೆ.

ಆ.6ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಕ್ಷಣಾ ಇಲಾಖೆಯಲ್ಲಿ ಶೇ.49ರಷ್ಟು ಎಫ್.ಡಿ.ಐ ಗೆ ಅನುಮತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ಎಫ್.ಡಿ.ಐಗೆ ಅನುಮತಿ ನೀಡಿರುವುದರಿಂದ ಮೋದಿ ಅವರನ್ನು ಭೇಟಿ ಮಾಡಲು ವಿದೇಶದ ಕಾರ್ಯದರ್ಶಿಗಳು ತುದಿಗಾಲಲ್ಲಿ ನಿಂತಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited