Untitled Document
Sign Up | Login    
Dynamic website and Portals
  
May 3, 2016

ಚೀನಾ ಸಬ್ ಮರೀನ್ ಗಳ ಮೇಲೆ ಭಾರತ ನಿಗಾ

ನವದೆಹಲಿ : ಭಾರತದ ಜಲಗಡಿಯನ್ನು ಅಕ್ರಮವಾಗಿ ಪ್ರವೇಶಿಸಿ ಆತಂಕ ಸೃಷ್ಟಿಸುತ್ತಿರುವ ಚೀನಾ ಅತಿಕ್ರಮಣ ನೀತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಿಂದು ಮಹಾಸಾಗರದಲ್ಲಿ ಚೀನಾ ಪ್ರಭುತ್ವ ತಡೆಯಲು ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಅಮೆರಿಕದೊಂದಿಗೆ ರಕ್ಷಣಾ ಒಪ್ಪಂದವೊಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದ್ದು, ಇದು ಜಾರಿಗೆ ಬಂದರೆ ಚೀನಾದ ಸಬ್ ಮರೀನ್ ​ಗಳ ಮೇಲೆ ಭಾರತ ನಿಗಾ ಇಡಲಿದೆ.

ದಕ್ಷಿಣ ಚೀನಾ ಇತ್ತೀಚೆಗೆ ಹಿಂದು ಮಹಾಸಾಗರದಲ್ಲೂ ತನ್ನ ಸಬ್​ ಮರೀನ್ ​ಗಳನ್ನು ನುಸುಳಿಸುವ ಮೂಲಕ ಭಾರತಕ್ಕೂ ಆತಂಕ ತಂದೊಡ್ಡಿದೆ. ಹೀಗಾಗಿ ಅಮೆರಿಕದೊಂದಿಗೆ ಭದ್ರತಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಭಾರತ, ಚೀನಾಕ್ಕೆ ತಿರುಗೇಟು ನೀಡಲು ಯೋಜನೆ ರೂಪಿಸಿದೆ.

ಕಳೆದ ತಿಂಗಳಷ್ಟೇ ಭಾರತ ಹಾಗೂ ಅಮೆರಿಕ ನಡುವೆ ಮಿಲಿಟರಿ ಲಾಜಿಸ್ಟಿಕ್ ಒಪ್ಪಂದ ಏರ್ಪಟ್ಟಿತ್ತು. ಇದು ಉಭಯ ದೇಶಗಳ ರಕ್ಷಣಾ ಸಂಬಂಧದಲ್ಲಿ ಮಹತ್ವದ ಹೆಜ್ಜೆಯಾಗಿತ್ತು. ಈಗ ಸಬ್​ ಮರೀನ್ ತಡೆ ಯುದ್ಧಾಸ್ತ್ರ (ಎಎಸ್​ಡಬ್ಲ್ಯೂ) ಹಂಚಿಕೆ ಒಪ್ಪಂದಕ್ಕೆ ಉಭಯ ದೇಶಗಳು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ಈ ಒಪ್ಪಂದ ಮಹತ್ವದ ಮೈಲಿಗಲ್ಲಾಗಲಿದೆ. ಮತ್ತೊಂದೆಡೆ ಚೀನಾಕ್ಕೂ ಕಠಿಣ ಸಂದೇಶ ರವಾನೆಯಾಗಲಿದೆ.

ಸಬ್ ಮರೀನ್ ಗಳನ್ನು ಪತ್ತೆ ಮಾಡುವ ವಿಶಿಷ್ಟ ಪಿ-8 ಯುದ್ಧವಿಮಾನವನ್ನು ಭಾರತ, ಅಮೆರಿಕದಿಂದ ಖರೀದಿಸಿದೆ. ಇವು ಸೋನಾರ್ ಹಾಗೂ ಮತ್ತಿತರ ತಂತ್ರಜ್ಞಾನ ಮೂಲಕ ಸಬ್ ಮರೀನ್​ ಗಳನ್ನು ಪತ್ತೆ ಮಾಡಿ, ಅವುಗಳ ಚಲನೆಯನ್ನೂ ಕಂಡುಹಿಡಿಯುತ್ತವೆ. ಈ ಯುದ್ಧ ವಿಮಾನಕ್ಕೆ ಸಬ್​ ಮರೀನ್​ಗಳನ್ನು ಧ್ವಂಸ ಮಾಡುವ ಸಾಮರ್ಥ್ಯವೂ ಇದೆ. ಅಮೆರಿಕ ಅಭಿವೃದ್ಧಿಪಡಿಸಿದ ಈ ಅತ್ಯಂತ ಸುಧಾರಿತ ಯುದ್ಧವಿಮಾನಗಳ ಸಮರಾಭ್ಯಾಸವನ್ನು ಉಭಯ ದೇಶಗಳು ಈಗಾಗಲೇ ನಡೆಸಿವೆ. ಮತ್ತೊಂದು ಸುತ್ತಿನ ಜಂಟಿ ಅಭ್ಯಾಸ ಜೂನ್ ​ನಲ್ಲಿ ಫಿಲಿಪೀನ್ ಸಮುದ್ರದಲ್ಲಿ ನಡೆಯುವ ಸಾಧ್ಯತೆಯಿದೆ. ಜಪಾನ್ ಕೂಡ ಇದರಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಈ ಯುದ್ಧ ವಿಮಾನಗಳನ್ನು ಬಳಸಿ ಹಿಂದು ಮಹಾಸಾಗರದ ಸರ್ವೆಕ್ಷಣೆ ನಡೆಸಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited