Untitled Document
Sign Up | Login    
ಗುಜರಾತಲ್ಲಿ ಕಾಲುವೆ ಸೋಲಾರ್‌

ಕಾಲುವೆ ಮೇಲೆ ನಿರ್ಮಿಸಲಾದ ಸೋಲಾರ್ ವಿದ್ಯುತ್ ಯೋಜನೆ

ವಿಶ್ವದಲ್ಲೇ ಮೊದಲು ಎಂಬ ಖ್ಯಾತಿ ಪಡೆದಿರುವ ಗುಜರಾತ್‌ನ ನರ್ಮದಾ ಕಾಲುವೆಯ ಮೇಲೆ ನಿರ್ಮಿಸಲಾದ ಸೌರ ವಿದ್ಯುತ್‌ ಘಟಕ ಲೋಕಾರ್ಪಣೆಗೊಂಡಿದೆ.

5.5 ಕಿ.ಮೀ. ಉದ್ದದ ಕಾಲುವೆಯ ಮೇಲೆ ಸ್ಥಾಪನೆಯಾಗಿದ್ದು, ಕಾಲುವೆಯ ಮೇಲೆ ಸೌರ ವಿದ್ಯುತ್‌ ಘಟಕ ನಿರ್ಮಾಣವಾಗಿದ್ದು ಇದೇ ಮೊದಲು.

ಈ ಹಿಂದೆ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದ್ದು, ಕೇವಲ 10 ತಿಂಗಳಲ್ಲಿ ಕಾಮಗಾರಿ ಮುಗಿಸಿರುವುದು ವಿಶೇಷ. 109.91 ಕೋಟಿ ರೂ. ವೆಚ್ಚದಲ್ಲಿ ಸರ್ದಾರ್‌ ಸರೋವರ ನರ್ಮದಾ ನಿಗಮ ನಿಯಮಿತ ಮತ್ತು ಹೈದರಾಬಾದ್‌ ಮೂಲದ ಮೇಘಾ ಎಂಜಿನಿಯರಿಂಗ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಎಂಇಐಎಲ್‌) ಇದನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿವೆ. ಮೊದಲ 25 ವರ್ಷ ಕಾಲ ಇದರ ನಿರ್ವಹಣೆಯನ್ನು ಎಂಇಐಎಲ್‌ ಮಾಡಲಿದೆ.

ವಿಶ್ವಾಮಿತ್ರಿ ಎಂಬಲ್ಲಿ ಆರಂಭವಾಗಿ ರೈಲ್ವೆ ಸಿಫೋನ್‌ ಎಂಬಲ್ಲಿಯವರೆಗೆ 5.5 ಕಿ.ಮೀ. ಉದ್ದಕ್ಕೆ ಕಾಲುವೆಯ ಮೇಲೆ ಸೌರ ಫ‌ಲಕಗಳು ಅನಾವರಣಗೊಂಡಿದೆ. ಸುಮಾರು 36 ಸಾವಿರ ಸೌರ ಫ‌ಲಕಗಳನ್ನು ಇಲ್ಲಿ ಅಳವಡಿಸಲಾಗಿದೆ. ಸುಮಾರು 150 ಕಿ.ಮೀ. ವೇಗದ ಬಿರುಗಾಳಿಯನ್ನೂ ತಾಳಿಕೊಳ್ಳುವ ಸಾಮರ್ಥ್ಯ ಈ ಫ‌ಲಕಗಳಿಗಿವೆ. ಮೊದಲ ವರ್ಷ 16.2 ದಶಲಕ್ಷ ಯೂನಿಟ್‌ನಷ್ಟು ವಿದ್ಯುತ್ತನ್ನು ಘಟಕ ಉತ್ಪಾದಿಸಲಿದೆ.

ಕರ್ನಾಟಕದಲ್ಲೂ ಇಂಥ ಯೋಜನೆ:

ಕರ್ನಾಟಕದ ಆಲಮಟ್ಟಿ ಅಣೆಕಟ್ಟೆಯ ಹಿನ್ನಿರಿಗೆ ತಡೆಗೋಡೆ ಕಟ್ಟಿ ಅಲ್ಲಿ ಗುಜರಾತ್‌ ಮಾದರಿಯಲ್ಲಿ ಸೌರ ವಿದ್ಯುತ್‌ ಫ‌ಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಬಗ್ಗೆ ಕರ್ನಾಟಕ ಚಿಂತಿಸಿದೆ.

ಕಾಲುವೆ ಸೋಲಾರ್ ನಿಂದ ಕಾಲುವೆಯ ನೀರು ಆವಿಯಾಗುವುದು ತಪ್ಪುತ್ತದೆ. ಕಾಲುವೆ ಮೇಲೆ ಘಟಕ ನಿರ್ಮಾಣದಿಂದ ಭೂಸ್ವಾಧೀನ ಸಮಸ್ಯೆ ಇರದು. ಹೀಗಾಗಿ ಯೋಜನೆ ಬೇಗ ಪೂರ್ಣವಾಗುತ್ತದೆ.

ಕಾಲುವೆ ಸೋಲಾರ್‌ ಯೋಜನೆಯ ಪ್ರಮುಖ ವಿಶೇಷತೆಗಳು:

*5.5 ಕಿ.ಮೀ ಉದ್ದ

*36,000 ಫ‌ಲಕ

*16.2 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ

*110 ಕೋಟಿ ರೂ.ಯೋಜನಾ ವೆಚ್ಚ

 

Author : . .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited