Untitled Document
Sign Up | Login    
ಬೆಂಗಳೂರು ಸಿಟಿ ರೈಲ್ವೆ ಸ್ಟೇಶನ್ ಗೆ ಪ್ರಯಾಣಿಕ ಸ್ನೇಹಿ ನಿಲ್ದಾಣದ ಗರಿಮೆ !

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಈಗ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಯ ಗರಿಮೆ. 2012-13ನೇ ಸಾಲಿನ "ಮೋಸ್ಟ್ ಫ್ರೆಂಡ್ಲಿ ರೈಲ್ವೆ ಸ್ಟೇಶನ್ ಇನ್ ಇಂಡಿಯಾ'' ಎಂಬ ಪ್ರಶಸ್ತಿಗೆ ಸಿಟಿ ರೈಲ್ವೆ ಸ್ಟೇಶನ್ ಭಾಜನವಾಗಿದೆ.

ಸಿಟಿ ರೈಲ್ವೆ ನಿಲ್ದಾಣದಲ್ಲಿ 10 ಫ್ಲ್ಯಾಟ್ ಫಾರಂಗಳಿಗೂ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ, ಅಂಡರ್ ಪಾಸ್ ಸೌಲಭ್ಯಗಳು ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಳು. ಇದಲ್ಲದೇ, ಇನ್ನೂ ಒಂದು ಮೇಲ್ಸೇತುವೆ ನಿರ್ಮಿಸುವ ಉದ್ದೇಶ ರೈಲ್ವೆ ಇಲಾಖೆಗೆ ಇದೆ. ಹೀಗೆ ಪ್ರಯಾಣಿಕ ಸ್ನೇಹಿ ವ್ಯವಸ್ಠೆ ಅಳವಡಿಸುತ್ತಿರುವುದರಿಂದಲೇ ಪ್ರವಾಸೋದ್ಯಮ ಪ್ರಶಸ್ತಿಯ ಗರಿಮೆ ಸಿಟಿ ರೈಲ್ವೆ ನಿಲ್ದಾಣದ ಮುಡಿಗೇರಿತು.

ಪ್ರಶಸ್ತಿಯೇನೋ ಸಿಟಿ ರೈಲ್ವೆ ಸ್ಟೇಶನ್ ನಿಲ್ದಾಣದ ಮುಡಿಗೇರಿದೆ. ಆದರೆ, ಪ್ರತಿನಿತ್ಯ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ 2.5 ಲಕ್ಷ ಪ್ರಯಾಣಿಕರನ್ನೊಮ್ಮೆ ಮಾತನಾಡಿಸಿದರೆ, ರೈಲ್ವೆ ಅಳವಡಿಸಿರುವ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಎಲ್ಲಿಗೂ ಸಾಲುತ್ತಿಲ್ಲ ಎಂಬುದು ಮನವರಿಕೆಯಾದೀತು. ಗುಜರಾತ್, ರಾಜಸ್ಥಾನ್, ಬಿಹಾರ, ಪಶ್ಚಿಮ ಬಂಗಾಳ, ಅಷ್ಟೇ ಏಕೆ ಕರ್ನಾಟಕದ ಗುಲ್ಬರ್ಗಾ, ಮಂಗಳೂರು ಮೊದಲಾದೆಡೆ ಪ್ರಯಾಣಿಸುವ ಟಿಕೆಟ್ ಬೇಕೆಂದರೆ 2 ತಿಂಗಳು ಮೊದಲೇ ಟಿಕೆಟ್ ಮುಂಗಡ ಕಾಯ್ದಿರಿಸಬೇಕಾದ ಪರಿಸ್ಥಿತಿ ಇದೆ.

ಸಿಟಿ ನಿಲ್ದಾಣಕ್ಕೆ ಪ್ರತಿದಿನ 63ಕ್ಕೂ ಹೆಚ್ಚು ಎಕ್ಸ್ ಪ್ರೆಸ್, 25ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಸೇರಿದಂತೆ 90ಕ್ಕೂ ಹೆಚ್ಚು ರೈಲುಗಳು ಬಂದು ಹೋಗುತ್ತಿವೆ. ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ, ಯಶವಂತಪುರ ಸೇರಿದಂತೆ ಒಟ್ಟಾರೆ ಬೆಂಗಳೂರು ವಿಭಾಗದಿಂದ ರೈಲ್ವೆಗೆ 2011-12ರಲ್ಲಿ 803 ಕೋಟಿ ರೂ. ಆದಾಯ ಸಂದಾಯವಾಗಿದೆ. 2012-13ರಲ್ಲಿ ಆದಾಯ 815 ಕೋಟಿ ರೂಪಾಯಿಗಳ ಗಡಿ ದಾಟಿತ್ತು.

ಈಗ ಪ್ರಶಸ್ತಿಯ ಗರಿಮೆ ಬಂದಿರುವ ಹಿನ್ನೆಲೆಯಲ್ಲಿ ಸಿಟಿ ರೈಲ್ವೆ ನಿಲ್ದಾಣದ ಪರಿಸ್ಥಿತಿ ಇನ್ನಾದರೂ ಸುಧಾರಿಸೀತೇ ಎಂಬುದು ಪ್ರಯಾಣಿಕರನ್ನು ಕಾಡುತ್ತಿರುವ ಪ್ರಶ್ನೆ.

 

Author : ಬೆಂಗಳೂರು ವೇವ್ಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited