Untitled Document
Sign Up | Login    
ಮೊಬೈಲ್ ಸಂಖ್ಯೆ ಜತೆ ಆಧಾರ್ ಲಿಂಕ್


ಯುಪಿಎ ಸರ್ಕಾರ ಜಾರಿಗೆ ತಂದ ಆಧಾರ್ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿರುವ ಕೇಂದ್ರ ಎನ್.ಡಿ.ಎ ಸರ್ಕಾಕಾರ, ಇದೀಗ ಮೊಬೈಲ್ ಸಿಮ್ ಜತೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಮುಂದಾಗಿದೆ.

ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಗಳನ್ನು ಮಾತ್ರ ಖರೀದಿಸಬಹುದು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ವಿಳಾಸದ ಯಾವುದೇ ಪುರಾವೆ ನೀಡಿದರೂ ಎಷ್ಟು ಬೇಕಾದರೂ ಸಿಮ್ ಕಾರ್ಡ್ ಖರೀದಿ ಮಾಡುತ್ತಿದ್ದರು. ಇದರಲ್ಲಿ ನಕಲಿ ವಿಳಾಸಗಳ ಭರಾಟೆಯೇ ಹೆಚ್ಚಾಗಿತ್ತು. ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ ಕೇಂದ್ರ ಸರ್ಕಾರ ಮೊಬೈಲ್ ನಂಬರ್ ಗಳನ್ನು ಆಧಾರ್ ಗೆ ಅಳವಡಿಸಲು ಮುಂದಾಗಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಕೆಲಸ ಆರಂಭವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಇಲಾಖೆ ಕಾರ್ಯದರ್ಶಿ ಆರ್.ಎಸ್.ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಗುರುತು ಪತ್ತೆಗಾಗಿ ಮೊಬೈಲ್ ಫೋನ್ ನ್ನು ಉತ್ತಮವಾಗಿ ಬಳಸಿಕೊಳ್ಳಲು, ಮಾಹಿತಿ, ವ್ಯವಹಾರ ವಿವರಗಳನ್ನು ಮೊಬೈಲ್ ನಿಂದ ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಆಧಾರ್ ಜತೆ ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.

 

Author : ಸನತ್ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited