Untitled Document
Sign Up | Login    
ಜಾಕ್ ಇರಿಸಿ ಮನೆ ಮೇಲೆತ್ತಬಹುದು!

ಚಿತ್ರಕೃಪೆ- ಸೋನು ಕಿಶನ್

ವಾಹನದ ಟಯರ್ ಪಂಕ್ಚರ್ ಆದಾಗ ಅದನ್ನು ಬದಲಾಯಿಸಲು ಜಾಕ್ ಬಳಸುವುದನ್ನು ನೋಡಿದ್ದೇವೆ. ಮಳೆ ಬಂದು ಕೊಳಚೆ ನೀರು ಮನೆಯೊಳಕ್ಕೆ ಬರತ್ತೆ ಅಂತ ಬೃಹದಾಕಾರದ ಮನೆಯನ್ನೇ ಜಾಕ್ ಮೂಲಕ ಮೇಲೆತ್ತಬಹುದೇ?

ಸಾಮಾನ್ಯವಾಗಿ ಒಮ್ಮೆ ಮನೆ ಕಟ್ಟಿದರೆ ಮುಗಿಯಿತು. ಅದನ್ನು ಆ ಜಾಗದಿಂದ ಅಲ್ಲಾಡಿಸಲಾಗದು. ಆದರೆ, ಈ ಮಾತೀಗ ಸುಳ್ಳಾಗಿದೆ. 1200 ಚದರ ಅಡಿ ವಿಸ್ತೀರ್ಣದ ಮನೆಯೊಂದನ್ನು ಜಾಕ್ ಬಳಸಿ ಮೇಲೆತ್ತುವ ಪ್ರಯತ್ನ ಇದೀಗ ಯಶಸ್ವಿಯಾಗಿದೆ. ಎರಡಂತಸ್ತಿನ ಮನೆ ಅದು. ಈ ಮನೆಯನ್ನು ಮೂರೂವರೆ ಅಡಿ ಮೇಲೆತ್ತಲು ಬರೋಬ್ಬರಿ ನೂರು ಜಾಕ್ ಗಳನ್ನು ಬಳಸಿದ್ದಾರೆ.

ಅಂದ ಹಾಗೆ ಇಂಥದ್ದೊಂದು ಸಾಹಸ ಈ ಹಿಂದೆ ಚೆನೈನಲ್ಲಿ ನಡೆದಿತ್ತು. ಈಗ ಬಿಹಾರದ ಪಟನಾದಲ್ಲೂ ಯಶಸ್ವಿಯಾಗಿದೆ. ನಿವೃತ್ತ ಕೈಗಾರಿಕಾ ಅಧಿಕಾರಿ ರಾಮ ಮೋಹನ್ ಝಾ ಪಟನಾದ ಪಟೇಲ್ ನಗರದಲ್ಲಿ 1982ರಲ್ಲಿ ಮನೆ ಕಟ್ಟಿಸಿದ್ದರು. ಕೆಲ ವರ್ಷಗಳ ಹಿಂದೆ ರಸ್ತೆಯನ್ನು ಎತ್ತರಿಸಿದ್ದರಿಂದ ಪ್ರತಿ ಮಳೆಗಾಲದಲ್ಲೂ ಅವರ ಮನೆಯೊಳಗೆ ನೀರು ತುಂಬುತ್ತಿತ್ತು. ಇದಕ್ಕೆ ಪರಿಹಾರವೇನು ಎಂದು ಚಿಂತಿಸುತ್ತಿದ್ದ ಝಾ, ಅನೇಕರನ್ನು ಸಂಪರ್ಕಿಸಿದರು. ಹಲವೆಡೆ ಜಾಕ್ ಹಾಕಿ ಮನೆ ಮೇಲೆತ್ತಿದ ಉದಾಹರಣೆಗಳಿವೆ ಎಂದು ತಿಳಿದು ಅದನ್ನೇ ತಾವೂ ಅನುಸರಿಸಲು ಮುಂದಾದರು. ಅಷ್ಟೇ ಅಲ್ಲ, ಶೀಘ್ರವೇ ವಿಶ್ವಕರ್ಮ ಅಂಡ್ ಕಂಪನಿಗೆ ಇದರ ಉಸ್ತುವಾರಿಯನ್ನೂವಹಿಸಿದರು.

ಈ ಎಲ್ಲ ಪ್ರಕ್ರಿಯೆಯನ್ನು ಅವರ ಮಾತುಗಳಲ್ಲೇ ಹೇಳುವುದಾದರೆ, " ಕಾಂಕ್ರೀಟ್ ಮನೆಗಳನ್ನು ಜಾಕ್ ಮೂಲಕ ಏರಿಸಬಹುದೆಂಬ ವಿಚಾರವನ್ನು ಸ್ನೇಹಿತರಿಂದ ತಿಳಿದೆ. ಹಳೆ ಪತ್ರಿಕೆಗಳು, ಇಂಟರ್ನೆಟ್ ಮೂಲಕವೂ ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿದೆ. ರಸ್ತೆ ಎತ್ತರದಲ್ಲಿದ್ದಾಗ ಮನೆಯೊಳಕ್ಕೆ ನೀರು ನುಗ್ಗುವುದು ಸಾಮಾನ್ಯ. ಇದಕ್ಕೆ ಮನೆಯನ್ನು ಮೇಲೆತ್ತುವುದರಿಂದ ಪರಿಹಾರ ಕಂಡುಕೊಳ್ಳಬಹುದೆಂಬ ಭರವಸೆ ಮೂಡಿತು. ಹೀಗಾಗಿಯೇ ಈ ನಿರ್ಧಾರ ತೆಗೆದುಕೊಂಡೆ. ಹೆಚ್ಚು ಕಡಿಮೆ ಒಂದು ತಿಂಗಳ ಅವಧಿಯಲ್ಲಿ ಮನೆಯನ್ನು ಮೂರೂವರೆ ಅಡಿ ಮೇಲೆತ್ತಲಾಗಿದೆ. 100 ಜಾಕ್ ಬಳಸಿದ್ದು, 25 ದಿನಗಳಲ್ಲೇ ಎರಡು ಅಡಿ ಮೇಲೇರಿಸಿದ್ದು ಸಾಧನೆ. ಇದಕ್ಕೆ ನನಗೆ ತಗುಲಿದ ವೆಚ್ಚ 3 ಲಕ್ಷ ರೂ.'' ಎಂದು ಮುಗುಳ್ನಗುತ್ತಾರೆ.

ಅಂದ ಹಾಗೆ ಇವರು ಈ ಒಂದು ತಿಂಗಳ ಅವಧಿಯಲ್ಲಿ ಮನೆ ಬಿಟ್ಟು ಬೇರೆ ಮನೆಯಲ್ಲೇನೂ ಇರಲಿಲ್ಲ. ಕೆಳಗೆ ಕೆಲಸ ನಡೆಯುತ್ತಿದ್ದರೆ ಅದರ ಮೇಲೆಯೇ ಕುಟುಂಬ ವಾಸವಿತ್ತು. ಹೀಗಾಗಿ ಇದು ಪಟನಾದ ಆಕರ್ಷಣೆಯ ಕೇಂದ್ರವೂ ಆಗಿತ್ತು.

 

Author : ಅವಿನಾಶ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited