Untitled Document
Sign Up | Login    
ದೆಹಲಿ ಅಂತಾರಾಷ್ಟ್ರೀಯ ಏರ್ಪೋರ್ಟ್ ವಿಶ್ವದಲ್ಲೇ ಎರಡನೆ ಸ್ಥಾನದಲ್ಲಿ!


ನಂಬೋದಾದ್ರೆ ನಂಬಿ.. ಭಾರತದ ಏರ್ ಪೋರ್ಟ್ ಗಳು ವಿಶ್ವದಲ್ಲಿಯೇ ಅತ್ಯುತ್ತಮ ಸೇವೆ ಸಲ್ಲಿಸುವ ಏರ್ ಪೋರ್ಟ್ ಗಳು ಅಂದರೆ ನಿಮಗೆ ಅಚ್ಚರಿ ಹಾಗೂ ಹೆಮ್ಮೆ ಆಗುವುದಿಲ್ಲವೆ? ಹೌದು, ದೆಹಲಿಯ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮುಂಬೈ ಚತ್ರಪತಿ ಶಿವಾಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಣಗಳು ಪ್ರಪಂಚದ ಮೊದಲ ಐದು ಅತ್ಯುತ್ತಮ ಸೇವೆ ಕೊಡುವ ವಿಮಾನ ನಿಲ್ದಾಣಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ!.

ಏರ್ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಶನಲ್ (ಎ.ಸಿ.ಐ) ವರದಿ ಪ್ರಕಾರ ವಿಮಾನ ನಿಲ್ದಾಣ ಸೇವಾ ಕ್ಷಮತೆ(ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ)ಯಲ್ಲಿ, ವಾರ್ಷಿಕ 25 ರಿಂದ 40 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ವಿಭಾಗದಲ್ಲಿ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ದ್ವಿತೀಯ ಸ್ಥಾನ ಪಡೆದರೆ, ಮುಂಬೈ ಏರ್ಪೋರ್ಟ್ ಮೊದಲ ಐದನೇ ಸ್ಥಾನದಲ್ಲಿದೆ.

ಅಷ್ಟೇ ಅಲ್ಲ, ಹೈದರಾಬಾದ್ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಹ ವಾರ್ಷಿಕ 5 ರಿಂದ 15 ದಶಲಕ್ಷ ಪ್ರಾಯಾಣಿಕರ ಸಾಮರ್ಥ್ಯ ವಿಭಾಗದಲ್ಲಿ ದ್ವೀತೀಯ ಸ್ಥಾನ ತನ್ನದಾಗಿಸಿದೆ!.

ಕೆಲವು ವರ್ಷಗಳ ಹಿಂದಿನವರೆಗೂ ಜಾನುವಾರು ದೊಡ್ದಿಗಳ ರೀತಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಏರ್ಪೋರ್ಟುಗಳು ಇಂದು ವಿಶ್ವದಲ್ಲೇ ಅತ್ಯುತ್ತಮ ಸೇವೆಗೆ ಹೆಸರು ಪಡೆಯುತ್ತಿರುವುದು ಹೆಮ್ಮೆಯ ವಿಷಯ.

ದೆಹಲಿಯ ಐ.ಜಿ.ಐ.ಎ. ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆ 'ದೆಹಲಿ ಇಂಟರ್ ನ್ಯಾಶನಲ್ ಲಿಮಿಟೆಡ್' ಗೆ ಮೇ 27, 2014 ರಂದು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆದ ಎ.ಸಿ.ಐ. ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದೆಹಲಿ ಏರ್ಪೋರ್ಟ್ ಗೆ ಇದು ಸತತ ಮೂರನೇ ಬಾರಿ ಲಭಿಸುತ್ತಿರುವ ಪ್ರಶಸ್ತಿ ಎಂಬುದುದ್ ವಿಶೇಷ.

'ಏರ್ಪೋರ್ಟ್ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುವುದರೊಂದಿಗೆ ಹಣಕಾಸಿನ ಕ್ಷಮತೆಯನ್ನು ನಿರ್ವಹಿಸುವುದು ಕೂಡಾ ಮುಖ್ಯವಾಗುತ್ತದೆ' ಎಂದು ಡಿ.ಐ.ಎ.ಎಲ್. ಮುಖ್ಯ ನಿರ್ವಹಣಾಧಿಕಾರಿ ಐ.ಪ್ರಭಾಕರ್ ರಾವ್ ಮಾಧ್ಯಮವೊಂದಕ್ಕೆ ಮಾತನಾಡುತ್ತ ಹೇಳಿದ್ದಾರೆ.

ಖಾಸಗೀಕರಣಗೊಂಡ ಕಳೆದ ಏಳು ವರ್ಷಗಳಲ್ಲಿ ದೆಹಲಿಯ ಐ.ಜಿ.ಐ.ಎ. ಏರ್ಪೋರ್ಟ್ ಗಮನಾರ್ಹ ಅಭಿವೃದ್ಧಿಯನ್ನು ಕಂಡಿದೆ.

ಸೇವಾ ಕ್ಷಮತೆಯಲ್ಲಿ ದೆಹಲಿ ಏರ್ಪೋರ್ಟ್ 5ಕ್ಕೆ 4.84 ಅಂಕಗಳನ್ನು ಗಳಿಸಿದೆ. ಅಲ್ಲದೆ, ವಿಶ್ವದಲ್ಲಿಯೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದ 235 ಏರ್ಪೋರ್ಟ್ ಗಳಲ್ಲಿ 6ನೇ ಸ್ಥಾನವನ್ನು ಪಡೆದಿದೆ!. 2007ರಲ್ಲಿ 3.02 ಅಂಕಗಳನ್ನು ಗಳಿಸಿ ಭಾಗವಹಿಸಿದ 125 ಏರ್ಪೋರ್ಟ್ ಗಳಲ್ಲಿ ಐ.ಜಿ.ಐ.ಎ 101ನೆ ಸ್ಥಾನ ಪಡೆದಿತ್ತು.

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಾರ್ಷಿಕ 60 ಮಿಲಿಯನ್ ಗಿಂತಲೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ಹೊಂದಿದೆ. 2013 36.88 ಮಿಲಿಯನ್ ಪ್ರಾಯಣಿಕರು ಈ ಏರ್ಪೋರ್ಟ್ ಮೂಲಕ ಪ್ರಯಾಣ ಮಾದಿದ್ದಾರೆ. ಅಲ್ಲದೆ, ಏರ್ಪೋರ್ಟ್ 600,000 ಟನ್ ಸಾಮಾನು ಸಾಗಣೆ ಕೂಡಾ ಈ ನಿಲ್ದಾಣದ ಮೂಲಕ ನಡೆದಿದೆ.

ಒಟ್ಟಿನಲ್ಲಿ, ಪ್ರಪಂಚದಲ್ಲೇ ಮೂರನೇ ಅತಿ ದೊಡ್ಡ ಇಕಾನಮಿ ಎಂಬ ಪಟ್ಟಕ್ಕೆ ಪಾತ್ರವಾದ ಭಾರತ ಶೆವಾ ಕ್ಶೇತ್ರದಲ್ಲೂ ವಿಶ್ವಮಾನ್ಯತೆ ಪಡೆಯುತ್ತಿರುವುದು ಸಂತಸದ ವಿಷಯ. 'ಅತಿಥಿ ದೇವೋ ಭವ' ಎಂಬ ನಮ್ಮ ನಂಬಿಕೆ ಇದರಿಂದ ಸಾಬೀತಾಗಿದೆ.


(ಕೃಪೆಃಐಬಿಎನ್.ಇನ್.ಕಾಂ)

 

Author : ಗೌರೀಶ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited