Untitled Document
Sign Up | Login    
ನನಸಾಯ್ತು ಪಶ್ಚಿಮ, ಉತ್ತರ ಬೆಂಗಳೂರಿಗರ ಕನಸು !

ನಮ್ಮ ಮೆಟ್ರೊ

ಬೆಂಗಳೂರಿಗರು ಅದರಲ್ಲೂ ಮುಖ್ಯವಾಗಿ ಪಶ್ಚಿಮ ಮತ್ತು ಉತ್ತರ ಬೆಂಗಳೂರುವಾಸಿಗಳ ಪಾಲಿಗೆ ಈ ವಾರಾಂತ್ಯದ ಸಂಭ್ರಮ ಸಡಗರಕ್ಕೊಂದು ವಿಶೇಷ ಕಾರಣವಿದೆ. ಮೆಟ್ರೊ ರೈಲಿನಲ್ಲಿ ಸಂಚರಿಸುವ ಅವರ ಬಹುದಿನಗಳ ಕನಸು ನನಸಾಗುತ್ತಿದ್ದು, "ನಮ್ಮ ಮೆಟ್ರೊ'' ರೈಲು ಸಂಚಾರ ಆರಂಭಿಸಲಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಸಂಪಿಗೆ ರಸ್ತೆ ನಡುವಿನ 10 ಕಿ.ಮೀ. ಅಂತರದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ.
ಶುಕ್ರವಾರ (ಫೆ.28)ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮೆಟ್ರೊ ರೈಲು ಸಂಚಾರಕ್ಕೆ ಹಸಿರುನಿಶಾನೆ ತೋರಲಿದ್ದಾರೆ. ಆದರೆ, ಸಾರ್ವಜನಿಕ ಸೇವೆಗೆ ಮೆಟ್ರೊರೈಲು ತೆರೆದುಕೊಳ್ಳುವುದು ಮಾ.1ರಂದು. ಅಂದು ಬೆಳಗ್ಗೆ 6 ಗಂಟೆಯಿಂದ ಸಂಚಾರ ಆರಂಭವಾಗಲಿದ್ದು, ರಾತ್ರಿ 10 ಗಂಟೆ ತನಕ ಎರಡು ಸ್ಟೇಷನ್ ಗಳ ನಡುವೆ ರೈಲು ಸಂಚರಿಸಲಿದೆ.

ಪೀಣ್ಯ ಮತ್ತು ಸಂಪಿಗೆ ರಸ್ತೆ ನಡುವಿನ ವಾಹನ ಸಂಚಾರ 45 ನಿಮಿಷಗಳದ್ದಾಗಿದ್ದು, ಮೆಟ್ರೊ ರೈಲಿನ ಮೂಲಕವಾದರೆ 18 ನಿಮಿಷದಲ್ಲಿ ತಲುಪಬಹುದಾಗಿದೆ. ಮೂರು ಬೋಗಿಗಳನ್ನು ಒಳಗೊಂಡ ರೈಲು 975 ಪ್ರಯಾಣಿಕರನ್ನು ಏಕಕಾಲಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಪ್ರತಿದಿನ 12 ರೈಲುಗಳು ಬೆಳಗ್ಗೆ 6 ರಿಂದ ರಾತ್ರಿ 10ರ ನಡುವೆ ಸಂಚರಿಸಲಿವೆ.

ಇನ್ನು ಶುಲ್ಕದ ವಿಚಾರಕ್ಕೆ ಬಂದರೆ, ಪ್ರಯಾಣದರ ಕನಿಷ್ಠ 10 ರೂ., ಗರಿಷ್ಠ 23 ರೂ.ಗಳಷ್ಟೇ ನಿಗದಿಪಡಿಸಲಾಗಿದೆ. ಈ ಪ್ರಯಾಣದರ ಬಿಎಂಟಿಸಿ ಎಸಿ ಸುವರ್ಣ ಬಸ್ಸಿನ ಕನಿಷ್ಠ ಪ್ರಯಾಣದರ 25 ರೂ., ವಜ್ರ ಬಸ್ಸಿನ ಕನಿಷ್ಠ 45 ರೂಪಾಯಿಗೆ ಹೋಲಿಸಿದರೆ ಕಡಿಮೆ ಇದೆ. ಇದಲ್ಲದೆ, ನಿತ್ಯ ಪ್ರಯಾಣಿಕರೇನಾದರೂ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಂಡರೆ ಗರಿಷ್ಠ ಪ್ರಯಾಣದಲ್ಲಿ 15% ಕಡಿಮೆಯಾಗಲಿದೆ. ಇಷ್ಟೊಂದು ಪ್ರಯೋಜನ ಹೊಂದಿರುವ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತಿರುವುದನ್ನೇ ಈ ಭಾಗದ ನಿತ್ಯ ಪ್ರಯಾಣಿಕರು ಕಾಯುತ್ತಿದ್ದಾರೆ.

 

Author : ಬೆಂ.ಸ. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited