Untitled Document
Sign Up | Login    
ಟ್ರಾಫಿಕ್ ಸಮಸ್ಯೆಗೆ ಪರಿಹಾರ - ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ


ದೇಶದ ಯಾವ ನಗರಗಳಲ್ಲಿ ನೋಡಿದರೂ ಟ್ರಾಫಿಕ್ ಕಿರಿ ಕಿರಿ ಇದ್ದಿದ್ದೆ. ಇಂತಹ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ ಜಾರಿಗೆ ಬಂದಿದೆ. ವಿದೇಶಗಳಲ್ಲಿ ಜನಪ್ರಿಯವಾಗಿರುವ ಈ* ವ್ಯವಸ್ಥೆ ಈಗ ಗುಜರಾತ್ ನ ಅಹಮದಾಬಾದ್ ನಲ್ಲಿ ಅಳವಡಿಸಲಾಗಿದೆ.

ಈ ಮೂಲಕ ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ ಅಳವಡಿಸಿದ ದೇಶದ ಮೊದಲ ನಗರ ಎಂಬ ಖ್ಯಾತಿಗೂ ಅಹಮದಾಬಾದ್ ಪಾತ್ರವಾಗಿದೆ.

ಟ್ರಾಫಿಕ್ ವ್ಯವಸ್ಥೆಯಲ್ಲಿಯೇ ಅತ್ಯಾಧುನಿಕ ವಿಧಾನ ಈ ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ. ಸುಗಮ ಸಂಚಾರಕ್ಕೆ ಅನುವಾಗುವಂತೆ ಮಾಹಿತಿ ತಂತ್ರಜ್ನಾನವನ್ನು ಬಳಸಿಕೊಂಡು ಈ ವ್ಯವಸ್ಥೆ ತರಲಾಗುತ್ತದೆ.

ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂನಲ್ಲಿ ಉಪಗ್ರಹ ಆಧಾರಿತ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಜಿಪಿಎಸ್ ವ್ಯವಸ್ಥೆ, ದೂರ ಸಂವಹನ ಸಾಧಿಸುವ ರೇಡಿಯೋ ಮಾಡೆಮ್ ವ್ಯವಸ್ಥೆ, ವಿಮಾಕ್ಸ್ ನೆಟ್ ವರ್ಕ್ ಇತ್ಯಾದಿ ವ್ಯವಸ್ಥೆಗಳ ಮೂಲಕ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಕ್ಷಣ ಕ್ಷಣದ ಮಾಹಿತಿ ಮೂಲಕ ಟ್ರಾಫಿಕ್ ಜಾಮ್ ಗೆ ಅವಕಾಶ ನೀಡದಂತೆ ಮಾಡಲಾಗುತ್ತದೆ.

ಪ್ರತಿ ಬಸ್ ಗಳಿಗೂ ಕಂಟ್ರೋಲ್ ಸಿಸ್ಟಮ್ ಇದ್ದು, ದಾರಿಯ ಕುರಿತು ಮಾಹಿತಿ, ಚಾಲನಾ ನಿಯಂತ್ರಣ, ಅಂತರ್ಜಾಲ ಮಾಹಿತಿ ವ್ಯವಸ್ಥೆಗಳಿತ್ತವೆ. ಪ್ರಯಾಣಕರ ಮೊಬೈಲ್ ಗೂ ಮಾಹಿತಿ ರವಾನಿಸಲಾಗುತ್ತದೆ.

ಈ ವ್ಯವಸ್ಥೆಯಲ್ಲಿ ಯಾವುದೇ ವಾಹನ ಚಾಲನಾ ನಿಯಮ ಉಲ್ಲಂಘನೆ ಮಾಡಲಾಗದು. ಕಾರಣ, ರಸ್ತೆಯಲ್ಲಿ ಅಳವಡಿಸಿರುವ ಕ್ಯಾಮರಾ, ಹಾಗೂ ಸೆನ್ಸರ್ ಗಳು ಕಂಟ್ರೋಲ್ ರೂಂ ಗೆ ಮಾಹಿತಿ ರವಾನಿಸುತ್ತದೆ. ವಾಹನದ ನಂಬರ್ ಪ್ಲೇಟ್ ಹಾಗೂ ನಿಯಲ ಉಲ್ಲಂಘನೆ ಮಾಡಿರುವ ಬಗ್ಗೆ ತಿಳಿದು, ತಕ್ಷಣ ವಾಹನದ ಮಾಲೀಕನಿಗೆ ದಂಡದ ಕುರಿತು ಮೊಬೈಲ್ ಗೆ ಮಾಹಿತಿಯೂ ಬಂದಿರುತ್ತದೆ.

ಈ ವ್ಯವಸ್ಥೆಯಲ್ಲಿ ಸುಗಮ ಸಂಚಾರಕ್ಕೆ ಅನುವಾಗುವಂತೆ ನ್ಯಾವಿಗೇಷನ್ ಸಿಸ್ಟಂ, ಟ್ರಾಫಿಕ್ ನಿಯಮ ಉಲ್ಲಂಘನೆಯಾಗದಂತೆ, ವಾಹನಗಳ ನಂಬರ್ ಗ್ರಹಿಸುವಂತಹ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗುತ್ತದೆ. ಈ ಮೂಲಕ ಯಾವ ರಸ್ತೆಯಲ್ಲಿ ಟ್ರಾಫಿಕ್ ಇದೆ? ಪಾರ್ಕಿಂಗ್ ಗೆ ಅವಕಾಶ ಎಲ್ಲಿದೆ? ವೇಗದ ಮಿತಿ ಎಷ್ಟು? ಘನ ವಾಹನ ಸಾಗುವ ದಾರಿ ಯಾವುದು? ಪಾದಚಾರಿ ಮಾರ್ಗ್, ಸೈಕಲ್ ದಾರಿ, ಬಸ್, ರೈಲು, ವಿಮಾನಗಳ ಟೈಮಿಂಗ್, ಹವಾಮಾನ ವರದಿ ಮೊದಲಾದವುಗಳ ಬಗ್ಗೆ ಮಾಹಿತಿಗಳ ಸೌಲಭ್ಯವನ್ನೂ ಅಳವಡಿಸಲಾಗುತ್ತದೆ. ತಾಂತ್ರಿಕತೆಯ ಗರಿಷ್ಠ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಸುಲಭ ಸಂಚಾರ ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲ, ನಗರ ರೈಲ್ವೆ, ಬಸ್, ಟ್ಯಾಕ್ಸಿಗಳಿಗೆ ಸಿಂಗಲ್ ಪೇಮೆಂಟ್ ಮೋಡ್ (ಏಕ ಪಾವತಿ ಪದ್ಧತಿ) ವ್ಯವಸ್ಥೆಯಿದ್ದು, ಪದೇ ಪದೇ ಟಿಕೆಟ್ ತೆಗೆಯುವ ಕಿರಿಕಿರಿ ಕೂಡ ತಪ್ಪುತ್ತದೆ. ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂನಿಂದಾಗಿ ಸಮಯದ ಉಳಿತಾಯ, ಇಂಧನ ಉಳಿತಾಯ, ಟ್ರಾಫಿಕ್ ಕಿರಿಕಿರಿಗೆ ಬ್ರೇಕ್, ಗರಿಷ್ಠ ರಸ್ತೆಯ ಸುರಕ್ಷತೆಯ ಜತೆಗೆ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.

ಈ ವ್ಯವಸ್ಥೆ ಆದಷ್ಟು ಬೇಗ ಬೆಂಗಳೂರಿನಂಥ ನಗರಗಳಿಗೂ ವಿಸ್ತರಿಸಲ್ಪಟ್ಟರೆ ಟ್ರಾಫಿಕ್ ಜ್ಯಾಮ್ ನಿಂದಾಗಿ ಪ್ರತಿದಿನ ಗಂಟೆಗಟ್ಟಲೆ ವ್ಯರ್ಥವಾಗುವ ಸಮಯದ ಉಳಿತಾಯವಾಗಬಹುದು, ಅಲ್ಲವೆ?

 

Author : ಸನತ್ ..

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited