Untitled Document
Sign Up | Login    
ನಮ್ಮ ಗ್ರಾಮ ನಮ್ಮ ರಸ್ತೆ : 3366 ಕಿ.ಮೀ. ರಸ್ತೆ ಅಭಿವೃದ್ಧಿ

ಸಾಂಧರ್ಬಿಕ ಚಿತ್ರ

ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಹಂತ Iರಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ 2೦ ಕಿ.ಮೀ. ದಂತೆ ಒಟ್ಟು 3714.65 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಸೆಪ್ಟೆಂಬರ್ ಅಂತ್ಯದವರೆಗೆ 1೦36ಕೋಟಿ ರೂ. ವೆಚ್ಚದಿಂದ 3366 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿದೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಹಂತ -IIರಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ 3೦ ಕಿ.ಮೀ. ನಂತೆ ಒಟ್ಟು 5728.12 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ 2೦13-14 ನೇ ಸಾಲಿನಲ್ಲಿ ರಾಜ್ಯದ 28೦೦ ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ 434.65 ಕೋಟಿ ರೂ. ವೆಚ್ಚದಿಂದ 325 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಉಳಿದ 2475 ಕಿ.ಮೀ. ರಸ್ತೆಯನ್ನು 2೦14ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಈ ಯೋಜನೆಯಡಿ ಕೈಗೊಳ್ಳಲಾದ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು 276.86 ಕೋಟಿ ರೂ. ಮೊತ್ತದ ಬಾಕಿ ಬಿಲ್ಲುಗಳನ್ನು ಪಾವತಿಸಿದ್ದು, ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ 7.25 ಕೋಟಿ ರೂ. ಮೊತ್ತದ ಬಾಕಿ ಬಿಲ್ಲುಗಳನ್ನು ಪಾವತಿಸಲಾಗಿದೆ. ಅಕ್ಟೋಬರ್ 3೦ ರ ವರೆಗೆ ಯಾವುದೇ ಬಿಲ್ಲುಗಳು ಪಾವತಿಗೆ ಬಾಕಿ ಇರುವುದಿಲ್ಲ. ಮಾಹೆಯಾನ ರಸ್ತೆ ಕಾಮಗಾರಿಗೆ ಹಾಗೂ ಕಂಸಿನಲ್ಲಿ ರಸ್ತೆ ವಾರ್ಷಿಕ ನಿರ್ವಹಣೆಗಾಗಿ ಪಾವತಿಸಿದ ಮೊತ್ತದ ವಿವರ ಕೋಟಿ ರೂ. ಗಳಲ್ಲಿ ಇಂತಿದೆ. ಜೂನ್ 84.83 (2.76) ಜುಲೈ 98.41(೦.86 ಆಗಸ್ಟ್ 43.97 ಹಾಗೂ ಸೆಪ್ಟೆಂಬರ್ - 49.65 (3.63).

ಗ್ರಾಮೀಣ ರಸ್ತೆಗಳಲ್ಲಿ ಹೆಚ್ಚಿನ ವಾಹನ ಸಾಂದ್ರತೆ ಇದ್ದಲ್ಲಿ ರಸ್ತೆ ನಿರ್ಮಿಸುವಾಗ ಕ್ಯಾರಿಯೇಜ್ ವೇ ವಿಡ್ತ್ 3.75 ಕಿ.ಮೀ. ಮತ್ತು ಎರಡೂ ಬದಿಗೆ ಒಂದು ಮೀಟರ್ ಅಗಲದ ಹಾರ್ಡ್ ಶೌಲ್ಡರ್ ನಿರ್ಮಿಸಲು ಸೂಚಿಸಲಾಗಿದೆ. ರಸ್ತೆ ಕಾಮಗಾರಿ ವಹಿಸಿದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಂಡ ನಂತರ 5 ವರ್ಷಗಳ ವಾರ್ಷಿಕ ನಿರ್ವಹಣೆ ಅವಧಿಯಲ್ಲಿ ಸದರಿ ರಸ್ತೆಯಲ್ಲಿ ಯಾವುದೇ ಪೈಪ್‌ಲೈನ್ ಅಳವಡಿಸುವ, ರೋಡ್ -ಕಟಿಂಗ್ ಮತ್ತು ರಸ್ತೆ ಬದಿ ಅತಿಕ್ರಮಿಸುವ ಕ್ರಮ ತಡೆಗಟ್ಟುವ ಜವಾಬ್ದಾರಿ ಹೊಂದಿರುತ್ತಾರೆ. ಇದನ್ನು ಗುತ್ತಿಗೆದಾರರ ಕರಾರಿನಲ್ಲಿಯೇ ಒಂದು ಭಾಗವಾಗಿ ಪರಿಗಣಿಸಲಾಗುತ್ತದೆ.

 

Author : ಜಿ. ಚಂದ್ರಕಾಂತ್, ಹಿರಿಯ ಸಹಾಯಕ ನಿರ್ದೇಶಕರು

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited