Untitled Document
Sign Up | Login    
ಕೆಐಜಿ ವರದಿ ಸರ್ಕಾರಕ್ಕೆ ಸಲ್ಲಿಕೆ: ಫ್ಲೋರ್ ಸ್ಪೇಸ್ ಇಂಡೆಕ್ಸ್ ಏರಿಕೆಗೆ ತಜ್ನರ ವಿರೋಧ

ಸ್ಥಳಾಭಾವಕ್ಕೆ ಗಗನಚುಂಬಿಗಳೇ ಪರಿಹಾರವೆ?..

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ಉಪಕ್ರಮದ ಕುರಿತು 10 ಶಿಫಾರಸ್ಸುಗಳನ್ನು ಒಳಗೊಂಡ ’ಕೆಐಜಿ-2020 ವರದಿ’ ಯನ್ನು ಕರ್ನಾಟಕ ಮಾಹಿತಿ ಮತ್ತು ಸಂವಹನ ತಂತ್ರಜ್ನಾನ ತಂಡ(ಕೆಐಜಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿನ ಫ್ಲೋರ್ ಏರಿಯಾ ರೇಷಿಯೋ (ಎಫ್ ಎ ಆರ್) ಹಾಗೂ ಫ್ಲೋರ್ ಸ್ಪೇಸ್ ಇಂಡೆಕ್ಸ್(ಎಫ್ ಎಸ್ ಐ) ಹೆಚ್ಚಳ ಸೇರಿದಂತೆ ಕೆಲವು ಶಿಫಾರಸ್ಸುಗಳ ಬಗ್ಗೆ ನಗರ ಯೋಜನಾ ತಜ್ನರು ಹಾಗೂ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಮತ್ತು ಸಂವಹನ ತಂತ್ರಜ್ನಾನ ಕ್ಷೇತ್ರದಲ್ಲಿ (ಐಸಿಟಿ) ಮುನ್ನಡೆಯನ್ನು ಕಾಯ್ದುಕೊಳ್ಳುವುದರ ಜೊತಗೆ ಜಾಗತಿಕ ಸವಾಲುಗಳನ್ನು ಎದುರಿಸಿ ಭವಿಷ್ಯದ ಬದಲಾವಣೆಗಳಿಗೆ ತಕ್ಕಂತೆ ಐಸಿಟಿ ನಿಯಮಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ಕೆಐಜಿ ತಂಡವನ್ನು ರಚಿಸಿತ್ತು.

ಅಲ್ಲದೇ ರಫ್ತು ಆದಾಯವನ್ನೂ ಸೇರಿಸಿ ಐಸಿಟಿ ಕೇತ್ರದಗಳಿಕೆಯನ್ನು 4 ಲಕ್ಷ ಕೋಟಿ ರೂ ಗೆ ಹೆಚ್ಚಿಸುವುದು, 2020ರೊಳಗೆ ಐಸಿಟಿ ವಲಯದಲ್ಲಿ 20 ಲಕ್ಷ ನೇರ ಉದ್ಯೋಗ ಸೃಷ್ಠಿಸುವುದು, 2020ರೊಳಗೆ 1ಸಾವಿರಕ್ಕೂ ಅಧಿಕ ಕಂಪನಿಗಳ ಕಾರ್ಯಾರಂಭಕ್ಕೆ ಅವಕಾಶ ಮಾಡಿಕೊಡುವ ವಿಷಯಗಳ ಬಗ್ಗೆಯೂ ಶಿಫಾರಸ್ಸು ನೀಡುವಂತೆ ಸರ್ಕಾರ ನಿರ್ದೇಶನ ನೀಡಿತ್ತು.

ಸಮಿತಿ ಪ್ರಮುಖವಾಗಿ 10 ಶಿಫಾರಸ್ಸುಗಳನ್ನು ಮಾಡಿದ್ದು, ಬಿಲ್ಡರ್ ಗಳಿಗೆ ಹೆಚ್ಚಿನ ಫ್ಲೋರ್ ಸ್ಪೇಸ್ ಇಂಡೆಕ್ಸ್(ಎಫ್ ಎಸ್ ಐ) ಗೆ ಅವಕಾಶ ಕಲ್ಪಿಸಿ ಅದರಿಮ್ದ ಬರುವ ಆದಾಯವನ್ನು ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಬಳಸಲು ಸಲಹೆ ಮಾಡಲಾಗಿದೆ.

ಆದರೆ ಇದರ ಕೆಲಶಿಫಾರಸುಗಳನ್ನು ಜಾರಿಗೆ ತಂದರೆ ನಗರದ ಜನರಿಗೆ ಹೆಚ್ಚಿನ ಸಮಸ್ಯೆಗಳಾಗುತ್ತದೆ ಎಂದು ತಜ್ನರು ಎಚ್ಚರಿಸಿದ್ದಾರೆ. ಶಿಫಾರಸುಗಳನ್ನು ಜಾರಿಗೆ ತರಲು ಹೆಚ್ಚಿನ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಬೇಕಿದೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.

ಕಾಂಕ್ರೀಟ್ ಕಾಡಾದ ಉದ್ಯಾನ ನಗರಿ ಬೆಂಗಳೂರು..
ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸದೇ ಎಫ್ ಎಸ್ ಐ ಹೆಚ್ಚಳಕ್ಕೆ ಶಿಫಾರಸು ಮಾಡಿರುವುದು ಅಪಾಯಕಾರಿ ಸಲಹೆ. ಇದರಿಂದ ನಗದ ಕಟ್ಟಡಗಳ ಎತ್ತರ ಬೆಳೆಯಬಹುದು. ಇದರಿಂದ ಜನಸಾಂದ್ರತೆ ಹೆಚ್ಚುತ್ತದೆ. ಲಭ್ಯವಿರುವ ಸೌಲಭ್ಯಗಳ ಮೇಲೆ ಒತ್ತ್ತಡ ಹೆಚ್ಚುತ್ತದೆ. ಇರುವ ಹಸಿರಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಗರ ಯೋಜನಾ ತಜ್ನರು ಆತಂಕವ್ಯಕ್ತಪಡಿಸಿದ್ದಾರೆ.

ಇತರ ಅಂತರಾಷ್ಟ್ರೀಯ ನಗರಗಳಿಗೆ ಹೋಲಿಸಿದರೆ ಎಫ್ ಎಸ್ ಐ ನಲ್ಲಿ ಭಾರತ ಹಿಂದೆ ಇದೆ. ನ್ಯೂಯಾರ್ಕ್ ಹಾಅಗೂ ಮ್ಯಾನ್ ಹಾಟನ್ ನಲ್ಲಿ ಎಫ್ ಎಸ್ ಐ 15 ಇದೆ. ನ್ಯೂಯರ್ಕ್ ನ ಬಹುಮಹಡಿ ಕಟ್ಟಡಗಳಲ್ಲೇ ಅಗತ್ಯ ಜನರೇಟರ್ ಗಳು, ಅಂಗಡಿಗಳು ಹಾಗೂ ಇತರ ಎಲ್ಲಾ ಸೌಲಭ್ಯಗಳಿದ್ದು, ಒಂದೊಂದು ಕತ್ತಡವೇ ಒಂದೊಂದು ನಗರದಂತಿದೆ. ಆದರೆ ಅಗತ್ಯ ಸೌಲಭಗಳನ್ನು ಒದಗಿಸುವಲ್ಲಿ ನಾವು ತೀರಾ ಹಿಂದಿರುವುದರಿಂದ ಕೇವಲ ಕಟ್ಟಡಗಳ ಎತ್ತರವನ್ನು ಹೆಚ್ಚಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕೆಐಜಿ ವರದಿಯಲ್ಲಿ ಆರ್ಥಿಕ ವಲಯದಡಿಯಲ್ಲಿ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಒಟ್ತು ಅಂದಾಜಿನ ಉಲ್ಲೇಖವಿಲ್ಲ. ಉಳಿದ ಐಟಿ ಯೋಜನೆಗಳಿಗೆ 90 ದಿನಗಳಲ್ಲಿ ಅನುಮತಿ ನೀಡುವ ಪ್ರಸ್ತಾಪವಿದೆ. ಇದರಿಂದ ನೀರು ಪೂರೈಕೆ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂದು ತಜ್ನರು ಅಭಿಪ್ರಾಯಪಟ್ಟಿದ್ದಾರೆ.
ತಜ್ನರ ಅಭಿಪ್ರಾಯಗಳು:

ಎಫ್ ಎಸ್ ಐ ಹೆಚ್ಚಳದಿಂದ ನಗರದ ಹಸಿರು ಪರಿಸರ ಹಾಳಾಗುತ್ತದೆ. ಇದೊಂದು ಅಪಾಯಕಾರಿ ಬೆಳವಣಿಗೆ. ನಾಗರಿಕ ಸೌಲಭಗಳನ್ನು ಹೆಚ್ಚಿಸದೇ ಎಫ್ ಎಸ್ ಐ ಹೆಚ್ಚಳದಿಂದ ಜನರ ಜೀವನ ಮಟ್ಟವನ್ನು ಕಡಿಮೆಯಾಗುತ್ತದೆ. ಮೊದಲು ಜನರ ಜೀವನ ಮಟ್ಟ ಉತ್ತಮಪಡಿಸಲು ಮುಂದಾಗಲಿ.
-ಮಹಾಲಕ್ಷ್ಮೀ ಪಾರ್ಥಸಾರಥಿ-ನಮ್ಮ ಬೆಂಗಳೂರು ಪ್ರತಿಷ್ಠಾನ ನಿರ್ದೇಶಕಿ

ಬಡ ರೈತರ ಜಮೀನನ್ನು ಬಡವರ ಮನೆ ನಿರ್ಮಾಣಕ್ಕೆಂದು ಸ್ವಾದೀನ ಪಡಿಸಿಕೊಂಡದ್ದು ಹಗರಣವಾಗಿದೆ. ಈಗ ಶ್ರೀಮಂತರಿಗಾಗಿ, ಹೈಟೆಕ್ ಉದ್ಯಮಗಳಿಗಾಗಿ ಭೂಸ್ವಾದೀನದ ಪ್ರಸ್ತಾಪ ಮಾದಲಾಗುತ್ತಿದೆ. 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 111 ಗ್ರಾಮಗಳಿಗೆ ಇನ್ನೂ ಸಮರ್ಪಕ ಕುಡಿಯುವ ನೀರು, ವಿದ್ಯುತ್, ನೈರ್ಮಲ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿಲ್ಲ. ಇಂತಹ ಸ್ಥಿತಿಯಲ್ಲಿ ಎಫ್ ಎಸ್ ಐ ಹೆಚ್ಚಳದ ಪ್ರಸ್ತಾಪ ಅರ್ಥಹೀನ
-ಅಲ್ಮಿತ್ರಾ ಪಟೇಲ್-ಪೌರ ತಜ್ನೆ

ನಗರದಲ್ಲಿ ಬಿಲ್ಡರ್ ಗಳು ಕಾನೂನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಎಫ್ ಎಸ್ ಐ ಹೆಚ್ಚಳದಿಂದ ಇನ್ನಷ್ಟು ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮೊದಲು ನಗರದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಿ
-ಆನಂದ್ ಶಿರೂರ್-ಸ್ವಾಭೀಮಾನ ಉಪಕ್ರಮದ ಅಧ್ಯಕ್ಷ

ನಮಗೆ ಎಂತಹ ಬೆಂಗಳೂರು ಬೇಕು ಎಂಬುದನ್ನು ನಾಗರಿಕರು ನಿರ್ದರಿಸುವಂತಿರಬೇಕು. ವ್ಕೆಐಜಿ ವರದಿ ತನ್ನ ಶಿಫಾರಸುಗಳ ಅನುಷ್ಠಾನದ ಮೆಲ್ವಿಚಾರಣೆಗಾಗಿ ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಲು ಸೂಚಿಸಿದೆ. ಇದು ಪರೋಕ್ಷವಾಗಿ ಆಡಳಿತದ ಮೆಲೆ ಖಾಸಗಿ ವಲಯ ಹಿಡಿತ ಸಾಧಿಸುವ ಪ್ರಯತ್ನ ಇದೊಂದು ಶೂನ್ಯ ಪರಿಹಾರ ಸೂಚಿಸುವ ಶಿಫಾರಸು.
-ವಿಜಯನ್ ಮೆನನ್ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ

(ಸಂಗ್ರಹ ವರದಿ)

 

Author : ಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited