BW News Bureau : ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವವನ್ನು ಜುಲೈ 8 ರಂದು ಕೆ.ಗೊಲ್ಲಹಳ್ಳಿ, ಸರ್ಕಾರಿ ಪ್ರೌಢಶಾಲೆ, 15 ರಂದು ಸರಸ್ವತಿ ವಿದ್ಯಾನಿಕೇತನ, ದೊಮ್ಮಸಂದ್ರ, 22 ರಂದು ಸರ್ಕಾರಿ ಪ್ರೌಢಶಾಲೆ, ಜೋಡಿಹುಸ್ಕೂರು ಶಾಲೆಗಳಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.
ಕ್ರೀಡೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಪುರುಷ/ಮಹಿಳೆಯರು ಭಾಗವಹಿಸಬಹುದಾಗಿದ್ದು, ಯಾವುದೇ ವಯೋಮಿತಿ ನಿರ್ಬಂಧವಿರುವುದಿಲ್ಲ. ಕ್ರೀಡೋತ್ಸವದಲ್ಲಿ ಓಟ, ಹಗ್ಗ ಜಗ್ಗಾಟ, ನದಿ ದಡ ಮ್ಯೂಜಿಕಲ್ ಚೇರ್, ಮೂರು ಕಾಲಿನ ಓಟ, ಗೋಣಿ ಚೀಲದ ಓಟ, ರಂಗೋಲಿ ಸ್ಪರ್ಧೆಗಳು ನಡೆಯುತ್ತಿದ್ದು, ಸಂಘ ಸಂಸ್ಥೆಗಳು, ಯುವಕ, ಯುವತಿಯರು ಶಾಲಾ ಕ್ರೀಡಾ ಪಟುಗಳು, ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ.
ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಕ್ರೀಡಾಕೂಟದಂದು ಬೆಳಿಗ್ಗೆ 9.30 ರೊಳಗೆ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು, ಬೆಳಿಗ್ಗೆ 09.30 ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಾಗಬೇಕು. ಕ್ರೀಡೆಯಲ್ಲಿ ಗೆದ್ದವರಿಗೆ ಮೊದಲನೇ ಬಹುಮಾನ ರೂ. 1000/- ಗಳು. ಎರಡನೇ ಬಹುಮಾನ ರೂ. 750/- ಮೂರನೇ ಬಹುಮಾನ ರೂ. 500/- ಗಳನ್ನು ಚೆಕ್ ಮುಖಾಂತರ ನೀಡಲಾಗುವುದು. ಆಯೋಜಕರು ಹಾಗೂ ತೀರ್ಪುಗಾರರ ತೀಮಾನವೇ ಅಂತಿಮ ತೀರ್ಮಾವಾಗಿರುತ್ತದೆ. ಕ್ರೀಡೆಗಳ ನಿಯಮಾವಳಿಗಳನ್ನು ಕ್ರೀಡಾಪಟುಗಳು ಶಿಸ್ತಿನಿಂದ ಕಡ್ಡಾಯವಾಗಿ ಪಾಲಿಸಬೇಕು. ಕ್ರೀಡೋತ್ಸವದಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕ್ರೀಡಾಪಟುಗಳು ಕ್ರೀಡಾ ಸಾಮಗ್ರಿಗಳನ್ನು ತಾವೇ ತರುವುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ದೂರವಾಣಿ ಸಂಖ್ಯೆ: 0802223977 ಮೊ:94886470ಇ-ಮೇಲ್ mld4158@gamail.com/adyssbangaloreeurban@gmail.com ಸಂಪರ್ಕಿಸಬಹುದು.