Untitled Document
Sign Up | Login    
Dynamic website and Portals
  
May 21, 2016

ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಎರಡನೆ ವರ್ಷಾಚರಣೆ ಹಿನ್ನಲೆ: ಸಾಧನಾ ಗೀತೆ ಬಿಡುಗಡೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ್ದು, ಈ ವರ್ಷಾಚರಣೆಯನ್ನು ಅಭೂತಪೂರ್ವವಾಗಿ ಆಚರಿಸಲು ನಿರ್ಧರಿಸಿದೆ.

ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಎರಡು ವರ್ಷ ತುಂಬಲಿದೆ. ಈ ಹಿನ್ನಲೆಯಲ್ಲಿ, ಸಾಧನಾ ಗೀತೆಯೊಂದನ್ನು ಬಿಡುಗಡೆ ಮಾಡಲಾಗಿದೆ. 'ಮೇರಾ ದೇಶ್‌ ಬದಲ್‌ ರಹಾ ಹೈ, ಆಗೇ ಬಢ್‌ ರಹಾ ಹೈ' ಎಂಬ ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟರ್‌ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಸಾಧನಾ ಗೀತೆ 2.49 ನಿಮಿಷದಷ್ಟಿದ್ದು, ಸರ್ಕಾರದ ವಿವಿಧ ಯೋಜನೆಗಳಾದ ಬೇಟಿ ಬಚಾವೋ, ಫ‌ಸಲ್‌ ಬಿಮಾ ಯೋಜನೆ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಹೇಳುತ್ತದೆ.

ಇದರ ಜತೆಗೆ 2ನೇ ವರ್ಷಾಚರಣೆ ಪ್ರಯುಕ್ತ ಮೇ 26ರಿಂದ 15 ದಿನಗಳ ಕಾಲ ದೇಶಾದ್ಯಂತ ಜನರಿಗೆ ಸರ್ಕಾರದ ಸಾಧನೆಗಳ ಪಟ್ಟಿಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ತಲುಪಿಸಲು ಬಿಜೆಪಿ ಮುಂದಾಗಿದೆ. ಇದಕ್ಕಾಗಿ ದೇಶಾದ್ಯಂತ 200 ಸುದ್ದಿಗೋಷ್ಠಿಗಳನ್ನು ಕರೆಯಲಾಗುತ್ತಿದೆ. ಅಲ್ಲದೇ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಭೆ ಕರೆದು ಬಿಜೆಪಿಯ ವಿಚಾರ-ಧೋರಣೆ ಬಗ್ಗೆ ತಿಳಿಸಲು ಚಿಂತಿಸಲಾಗಿದೆ.

15 ದಿನಗಳ ಕಾರ್ಯಕ್ರಮದ ವೇಳೆ ಸಂಸದರು ತಮ್ಮ ಕ್ಷೇತ್ರಗಳಲ್ಲೇ ಇರುವಂತೆ (ಕನಿಷ್ಠ ಒಂದು ರಾತ್ರಿಯ ವಾಸ್ತವ್ಯ) ಬಿಜೆಪಿ ತನ್ನ ಸದಸ್ಯರಿಗೆ ಸೂಚಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ಮೇ 21ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಬಿಜೆಪಿ ಪದಾಧಿಕಾರಿಗಳು, ವಕ್ತಾರರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited