Untitled Document
Sign Up | Login    
Dynamic website and Portals
  
May 17, 2016

ಇರಾನ್ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮೇ 22 ಮತ್ತು 23ರಂದು ಎರಡು ದಿನಗಳ ಇರಾನ್ ಪ್ರವಾಸ ಕೈಗೊಳ್ಳಲಿದ್ದಾರೆ.

ಇರಾನ್ ಅಧ್ಯಕ್ಷ ಡಾ.ಹಸ್ಸನ್ ರೌಹಾನಿ ಅವರ ಆಹ್ವಾನದ ಮೇರೆಗೆ ಮೋದಿಯವರು ಇರಾನ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತ ಮತ್ತು ಇರಾನ್ ದೀರ್ಘಕಾಲದ ನಾಗರಿಕ ಸಂಬಂಧವನ್ನು ಹೊಂದಿದ್ದು, ಈ ಭೇಟಿ ಇಂಧನ ಸಮೃದ್ಧ ರಾಷ್ಟ್ರದೊಂದಿಗೆ ಸಂಬಂಧ ಗಟ್ಟಿಗೊಳಿಸಲು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಪ್ರಧಾನಿಯವರ ಭೇಟಿಯಿಂದ ಗಲ್ಫ್ ರಾಷ್ಟ್ರದಿಂದ ಎರಡು ಪಟ್ಟು ಹೆಚ್ಚು ತೈಲ ಆಮದು ಮಾಡಿಕೊಳ್ಳಲು ಭಾರತ ನಿರೀಕ್ಷಿಸುತ್ತಿದ್ದು, ಅನಿಲ ನಿಕ್ಷೇಪವನ್ನು ಬಲಪಡಿಸುವ ಯೋಜನೆಯಲ್ಲಿದೆ.

ಅಲ್ಲದೇ ಈ ವೇಳೆ ಇರಾನ್ ನ ದಕ್ಷಿಣ ಪ್ರಾಂತ್ಯದಲ್ಲಿರುವ ಚಬಹರ್ ಬಂದರನ್ನು ಅಭಿವೃದ್ಧಿಪಡಿಸುವ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited