Untitled Document
Sign Up | Login    
Dynamic website and Portals
  
May 16, 2016

ಸುಷ್ಮಾ ಸ್ವರಾಜ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ : ಅನಾರೋಗ್ಯದ ನಿಮಿತ್ತ ಕಳೆದ 20 ದಿನಗಳ ಹಿಂದೆ ದೆಹಲಿಯ ಏಮ್ಸ್ ಆಸ್ಪತೆ​ಗೆ ದಾಖಲಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನ್ಯುಮೋನಿಯಾ ಮತ್ತು ಮೂತ್ರ ಪಿಂಡದ ಸಮಸ್ಯೆಯಿಂದ ಸುಷ್ಮಾ ಸ್ವರಾಜ್ ಬಳಲುತ್ತಿದ್ದರು. ಏಮ್ಸ್​ ನ ತಜ್ಞ ವೈದ್ಯರ ತಂಡ ಸುಷ್ಮಾ ಸ್ವರಾಜ್ ಅವರಿಗೆ ಚಿಕಿತ್ಸೆ ನೀಡಿದ್ದು, ಸುಷ್ಮಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರ ತಂಡ ಸುಷ್ಮಾ ಅವರನ್ನು ಬಿಡುಗಡೆ ಮಾಡಿದೆ ಎಂದು ಏಮ್ಸ್ ​ನ ನಿರ್ದೇಶಕ ಎಂ.ಸಿ. ಮಿಶ್ರಾ ತಿಳಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರು ಏಪ್ರಿಲ್ 25 ರಂದು ಏಮ್ಸ್ ​ಗೆ ದಾಖಲಾಗಿದ್ದರು. ಎದೆನೋವು ಮತ್ತು ಜ್ವರದ ಕಾರಣದಿಂದ ಅವರು ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ ಸುಷ್ಮಾ ಅವರನ್ನು ಕೂಲಂಕಷ ತಪಾಸಣೆಗೆ ಒಳಪಡಿಸಿದ ವೈದ್ಯರು 20 ದಿನಗಳವರೆಗೆ ಚಿಕಿತ್ಸೆ ನೀಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited